ಹಿಂದುಳಿದ ವರ್ಗಗಳ ಸಂಪಾದಕರ ಮತ್ತು ವರದಿಗಾರರ ಸಂಘದ ವತಿಯಿಂದ ಪ್ರಶಸ್ತಿ

ಬೆಂಗಳೂರು,ಸೆ.7- ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಯಚೂರಿನಲ್ಲಿ ಇದೇ 16ರಂದು ಆಯೋಜಿಸಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಿ.ವೆಂಕಟಸಿಂಗ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಪ್ರಶಸ್ತಿ ಪುರಸ್ಕøತರ ವಿವರಗಳನ್ನು ಪ್ರಕಟಿಸಿದರು. 1. ವಿ.ಪಿ.ಸಿಂಗ್ ಪ್ರಶಸ್ತಿ(ಅತ್ಯುತ್ತಮ ರಾಜಕೀಯ ವರದಿಗೆ ), ಬಸವರಾಜ್ ಬೋಗವಾಗಿ-ಪ್ರಜಾವಣಿ ಮಾನ್ವಿ , 2. ಬಿ.ಪಿ.ಮಂಡಲ ಪ್ರಶಸ್ತಿ(ಆರ್ಥಿಕ ದುರ್ಬಲ ವರ್ಗದವರ ಸ್ಥಿತಿಗತಿ ಕುರಿತ ವರದಿಗೆ) ಯೋಗೇಶ್.ಜಿ- ವರದಿಗಾರ ಪ್ರಜಾವಾಣಿ, ಮಂಡ್ಯ 3. ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ(ಅತ್ಯುತ್ತಮ ಮಾನವೀಯ ವರದಿಗೆ) -ರಾಜು ಕಂಬಾರ, ಸಂಪಾದಕ ಸಿರಿನಾಡು, ಬೆಂಗಳೂರು. 4. ನಾರಾಯಣಗುರು ಪ್ರಶಸ್ತಿ( ಅತ್ಯುತ್ತಮ ಶಿಕ್ಷಣ ವರದಿಗೆ)-ಅರುಣ್‍ಕುಮಾರ್, ಹಿರಿಯ ಪತ್ರಕರ್ತ, 5.ಪೆರಿಯಾರ್ ಪ್ರಶಸ್ತಿ(ಕೆ.ಶ್ರೀನಿವಾಸ್-ವರದಿಗಾರ-ಇಂದು ಸಂಜೆ) 6. ಎಲ್.ಜಿ.ಹಾವನೂರು ಪ್ರಶಸ್ತಿ( ಅತ್ಯುತ್ತಮ ಗ್ರಾಮಾಂತರ ವರದಿಗೆ)- ಅಶೋಕ್‍ಕುಮಾರ್.ಬಿ-ವರದಿಗಾರ, ಟಿವಿ18, 7.ದೇವರಾಜ ಅರಸು ಪ್ರಶಸ್ತಿ- ವೆಂಕಟೇಶ್ ಹೂಗಾರ್, ವಿಜವಾಣಿ, ರಾಯಚೂರು 8. ಕಾಮರಾಜ ಪ್ರಶಸ್ತಿ- ಮಂಜುನಾಥ್ ಹರಪಲ್ಲಿ-ಪ್ರಜಾವಣಿ 9.ಟಿ.ಮರಿಯಪ್ಪ ಪ್ರಶಸ್ತಿ -ನಾಗಮಂಗಲ ವೆಂಕಟೇಶ್-ವಿಜವಾಣಿ, 10. ಡಿ.ವಿ.ಜಿ.ಪ್ರಶಸ್ತಿ- ವೆಂಕಟೇಶಪ್ಪ-ಬಿಟಿವಿ ಕೋಲಾರ, 11.ನೆಟ್ಕಲ್ಲಪ್ಪ ಪ್ರಶಸ್ತಿ-ಭವಾನಿ ಸಿಂಗ್, ಕಲಬುರಗಿ.
ಗಣನೀಯ ಸೇವೆ ಸಲ್ಲಿಸುತ್ತಿರುವ ಸಂಪಾದಕರಿಗೆ ಅತ್ಯುತ್ತಮ ವಿಡಂಬನಾತ್ಮಕ ವರದಿಗೆ ಸಂಪಾದಕರಿಗೆ ಮತ್ತು ಪ್ರಕಾಶಕರಿಗೆ ಪತ್ರಿಕೋದ್ಯಮದ ವಿವಿಧ ಸಂಘಟನೆಗಳಲ್ಲಿ ಪಾಲ್ಗೊಂಡವರಿಗೆ, ಉದ್ಯೋನ್ಮುಖ ವರದಿಗಾರರಿಗೆ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಸನ್ಮಾನಿಸಲು ಸಂಘ ತೀರ್ಮಾನಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಕಾರ್ಯದರ್ಶಿ ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ