ಬೆಂಗಳೂರು, ಸೆ.6- ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನಡೆಯುತ್ತಿರುವ ಕೃಷ್ಣಕಥಾ ಸಪ್ತಾಹದಲ್ಲಿ ಎರಡನೇ ದಿನದ ಕೃಷ್ಣಕಥಾ ಪ್ರವಚನವನ್ನು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ನಡೆಸಿಕೊಟ್ಟರು. ಖ್ಯಾತ ಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ ಹೆಗಡೆಯವರು ಸ್ಥಳದಲ್ಲೇ ಬಿಡಿಸಿದ ಚಿತ್ರ ಹಾಗೂ ಆನಂತರ ನಡೆದ ರೂಪಕ ಜನಮನ ಸೆಳೆಯಿತು.
ಪ್ರಸಿದ್ಧ ಶ್ರೀ ರಾಮಕಥಾ ಮಾದರಿಯಲ್ಲಿ ಪ್ರವಚನ – ಗಾಯನ – ವಾದನ – ಚಿತ್ರ – ರೂಪಕಗಳ ಸಂಯೋಜನೆಯಲ್ಲಿ, ಶ್ರೀ ಕೃಷ್ಣನ ತತ್ವಗಳನ್ನು ಜನಮಾನಸಕ್ಕೆ ಬಿತ್ತರಿಸುವ ವಿಶಿಷ್ಟ ಕಾರ್ಯಕ್ರಮ ಕೃಷ್ಣ ಕಥಾವನ್ನು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಮಹಾ ಸ್ವಾಮಿಗಳು ನಡೆಸಿ ಕೊಡಲಿದ್ದು, ನಾಡಿನ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ.
ಕಲಾಸಕ್ತರು ಹಾಗೂ ಆಸ್ತಿಕ ಭಕ ್ತಜನರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೋರಂಜನೆಯೊಂದಿಗೆ ಕೃಷ್ಣನ ತತ್ತ್ವಗಳನ್ನು ಅರಿತು ಕೊಳ್ಳ ಬಹುದಾಗಿದೆ. ಸೆ.8ರವರೆಗೆ ರಾಮಚಂದ್ರಾಪುರ ಮಠ, ಗಿರಿನಗರದಲ್ಲಿ ಪ್ರತಿ ದಿನ ಸಂಜೆ 6 ರಿಂದ 9 ಗಂಟೆಯವರೆಗೆ ನಡೆಯಲಿದೆ.