ಶ್ವಾಸಕೋಶ ಕಸಿ ಯಶಸ್ವಿ: ಬಿಜಿಎಸ್ ಗ್ಲೆನ್ ಈಗಲ್ಸ್ ಗ್ಲೋಬಲ್ ಆಸ್ಪತ್ರೆ ವೈದ್ಯರ ಸಾಧನೆ

ಬೆಂಗಳೂರು, ಸೆ.6- ಇಬ್ಬರು ಹಿರಿಯ ನಾಗರಿಕ ರೋಗಿಗಳಿಗೆ ಶ್ವಾಸಕೋಶ ಕಸಿಯ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬಿಜಿಎಸ್ ಗ್ಲೆನ್ ಈಗಲ್ಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ಸುಮಾರು ಕೇರಳ ಮೂಲದ ಸುರೇಶ್ ಬಾಬು (61) ಮತ್ತು ಮಧ್ಯಪ್ರದೇಶದ ಜಯಂತ್‍ಕುಮಾರ್ ಅವರಿಗೆ ಒಂದು ವಾರದ ಅವಧಿಯಲ್ಲಿ ಯಶಸ್ವಿ ಶ್ವಾಸಕೋಶ ಕಸಿ ಮಾಡಲಾಗಿದ್ದು, ಇದೊಂದು ಅಪರೂಪದ ಘಟನೆಯಾಗಿದೆ ಎಂದು ಆಸ್ಪತ್ರೆಯ ಕಾರ್ಡಿಯಾಕ್ ಸರ್ಜರಿಯ ಮುಖ್ಯಸ್ಥ ಡಾ.ಸಂದೀಪ್ ಅತ್ತಾವರ್ ತಿಳಿಸಿದರು.
ಸ್ವತಃ ತಾವೇ ಕೈಗೊಂಡ ಶಸ್ತ್ರಚಿಕಿತ್ಸೆಯ ವಿವರಗಳನ್ನು ವಿವರಿಸುತ್ತಾ ಆ ಕ್ಲಿಷ್ಟಕರ ಸನ್ನಿವೇಶಗಳನ್ನು ಹಂಚಿಕೊಂಡರು. ಆಮ್ಲಜನಕ ಸಹಾಯದಿಂದಲೇ ಉಸಿರಾಟವಾಡಿ ಹಾಸಿಗೆಯಲ್ಲೇ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವರಿಗೆ ದಾನಿಗಳ ರೂಪದಲ್ಲಿ (ಮೈಸೂರಿನಿಂದ ತಂದ) ಶ್ವಾಸಕೋಶವನ್ನು ಇವರಿಗೆ ಕಸಿ ಮಾಡಲಾಗಿತ್ತು. ಈಗ ಚೇತರಿಸಿಕೊಂಡಿದ್ದು, ಹೊಸ ಜೀವನ ನಡೆಸಬಹುದಾಗಿದೆ ಎಂದರು.
ನಮ್ಮ ಗ್ಲೆನ್‍ಈಗಲ್ಸ್ ಗ್ಲೋಬಲ್ ಆಸ್ಪತ್ರೆ ಹೃದಯ ಮತ್ತು ಶ್ವಾಸಕೋಶ ಚಿಕಿತ್ಸೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ್ದು, ನಮ್ಮ ಹೊಸ ಹಿರಿಮೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ