ಬೆಂಗಳೂರು, ಸೆ.6- ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಮೆಸ್ಸೆ ಮೆನ್ಚನ್ ಸಂಸ್ಥೆ ವತಿಯಿಂದ ಸೆ.26ರಿಂದ 28ರವರೆಗೆ ಎಲೆಕ್ಟ್ರಾನಿಕಾ ಇಂಡಿಯಾ ಮತ್ತು ಪೆÇ್ರಡಕ್ಟ್ರಾನಿಕಾ ಇಂಡಿಯಾದ ಮೂರು ದಿನಗಳ ಅವಳಿ ಮೇಳ ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ ವಸ್ತು ಪ್ರದರ್ಶನಗಳು, ಸಮಾವೇಶಗಳು ಮತ್ತು ಸಿಇಒ ವೇದಿಕೆಯಂತಹ ಬೃಹತ್ ಮಾರುಕಟ್ಟೆಯ ಅವಕಾಶಗಳು ಲಭ್ಯವಾಗಲಿವೆ. ಎರಡು ವರ್ಷಗಳ ಹಿಂದೆ ಏರ್ಪಡಿಸಿದ್ದ ಮೇಳಕ್ಕಿಂತ ಶೇಕಡಾ 40ರಷ್ಟು ಬೃಹತ್ ಮೇಳ ಇದಾಗಲಿದೆ. ಈ ಆವೃತ್ತಿಯಲ್ಲಿ ಐಪಿಸಿಎ ಎಕ್ಸ್ಪೆÇೀ ಮತ್ತು ಭಾರತದಲ್ಲಿ ಮೊಬೈಲï ಉತ್ಪಾದನೆಗೆ ಆದ್ಯತೆ ನೀಡುವ ಮೂರನೇ ಆವೃತ್ತಿಯ ಅಡ್ವಾಂಟೇಜï
ಇಂಡಿಯಾ ಸಮ್ಮಿಟï ಅನ್ನು ಕೂಡಾ ಇದೇ ಜಾಗದಲ್ಲಿ ಆಯೋಜಿಸಲಾಗುತ್ತದೆ.
ಇದೇ ಜಾಗದಲ್ಲಿ ನಡೆಯುವ ಐಪಿಸಿಎ ಎಕ್ಸ್ಪೆÇೀ ಪ್ರಿಂಟೆಂಡ್ ಸಕ್ರ್ಯೂಟï ಬೋರ್ಡ್
ತಯಾರಿಕಾ ವಲಯಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಈ ಎಕ್ಸ್ಪೆÇೀವನ್ನು ಭಾರತೀಯ
ಪ್ರಿಂಟೆಂಡ್ ಸಕ್ರ್ಯೂಟï ಸಂಘ (ಇಎಲ್ಸಿಐಎನ್ಎ) ಅವರು ಏರ್ಪಡಿಸಿದ್ದಾರೆ.
ಮೇಳದ ಬಗ್ಗೆ ಮೆಸ್ಸೆ ಮೆನ್ಚನ್ ಇಂಡಿಯಾದ ಮುಖ್ಯಕಾರ್ಯನಿರ್ವಹಣಾಧಿಕಾರಿ
ಭೂಪಿಂದರ್ ಸಿಂಗ್ ವಿವರ ನೀಡಿ, ನಮ್ಮ ವ್ಯಾಪಾರ ಮೇಳ ಸಕಾರಾತ್ಮಕ
ಮಾರುಕಟ್ಟೆ ಭಾವನೆಗಳ ನಿಜವಾದ ಪ್ರತಿಫಲನವಾಗಿದೆ ಮತ್ತು ಇದು ಇದುವರೆಗಿನ
ಅತಿದೊಡ್ಡ ಮೇಳವೂ ಆಗಿದೆ. ಉನ್ನತ ಮಟ್ಟದ ಪೂರಕ ಕಾರ್ಯಕ್ರಮಗಳೊಂದಿಗೆ
ಸಿದ್ಧ ಉತ್ಪನ್ನಗಳು ಮತ್ತು ತಂತ್ರe್ಞÁನಗಳ ಪ್ರದರ್ಶನದ ವ್ಯವಸ್ಥೆ
ಇರುತ್ತದೆ. ಭಾರತದಲ್ಲಿ ಎಲೆಕ್ಟ್ರಾನಿಕ್ ಕೈಗಾರಿಕೆಗಾಗಿ ಬೃಹತ್ ಮಾರುಕಟ್ಟೆ
ಅವಕಾಶಗಳನ್ನು ತೆರೆದುಕೊಡುವ ಎಲೆಕ್ಟ್ರಾನಿಕಾ ಇಂಡಿಯಾ ಮತ್ತು ಪೆÇ್ರಡಕ್ಟ್ರಾನಿಕಾ
ಇಂಡಿಯಾದಂತಹ ಉನ್ನತ ಮಟ್ಟದ ಕಾರ್ಯಕ್ರಮವೂ ಇರಲಿದೆ ಎಂದು ತಿಳಿಸಿದರು.
ಬಿಐಇಸಿಯಲ್ಲಿ 27 ದೇಶಗಳ 500ಕ್ಕೂ ಅಧಿಕ ಕಂಪನಿಗಳ ಪ್ರತಿನಿಧಿಗಳು ಮೇಳದಲ್ಲಿ
ಭಾಗವಹಿಸುವುದನ್ನು ದೃಢೀಕರಿಸಿದ್ದಾರೆ. ಅಟೋಮೋಟೊವ್ ಎಲೆಕ್ಟ್ರಾನಿಕ್ಸ್,
ಮೊಬೈಲï ತಯಾರಿಕೆ, ಪಿಸಿಬಿ ಉತ್ಪಾದನೆಯ ತಂತ್ರe್ಞÁನ ಮತ್ತು ಪಿಸಿಬಿ
ತಂತ್ರe್ಞÁನದಲ್ಲಿನ ಇತ್ತೀಚಿನ ಮಾಹಿತಿ ಬಗ್ಗೆ ಮೇಳದಲ್ಲಿ ಬೆಳಕು ಚೆಲ್ಲಲಾಗುತ್ತದೆ
ಎಂದು ಅವರು ತಿಳಿಸಿದರು.