ಮಲ್ಲೇಶ್ವರದ ಪೈಪ್‍ಲೇನ್‍ನಲ್ಲಿ ನಡೆದ ಶ್ರೀ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ:

ಮಲ್ಲೆಶ್ವರದ ಪೈಪ್‍ಲೇನ್‍ನಲ್ಲಿರುವ ಶ್ರೀ ಗುರುರಾಜ ಭಕ್ತ ಮಂಡಳಿಯವರಿಂದ 348ನೇ ವರ್ಷದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವವನ್ನು, ಪೈಪ್‍ಲೇನ್‍ನಲ್ಲಿರುವ ಶ್ರೀ ಕೆರಮಲು ವೀರಣ್ಣ ಆಶ್ರಮದ ಆವರಣದಲ್ಲಿ ಆಗಸ್ಟ್ 27 ರಿಂದ ಆಗಸ್ಟ್ 29 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು.
ದಿನಾಂಕ 27-08-18 ಸೋಮವಾರದಂದು ಪ್ರಾತ: ಕಾಲ 8 ಗಂಟೆಯಿಂದ ಅಭಿಷೇಕ, ಅರ್ಚನೆ, ಪಾದಪೂಜೆ ಮತ್ತು ಕನಾಭಿಷೇಕ ನೆರವೇರಿಸಲಾಯಿತು. ನಂತರ 11 ಗಂಟೆಗೆ ಶ್ರೀಮತಿ ಚಂದ್ರಿಕಾ ಬದರಿನಾಥ್-ಶಾರದಾ ಗಾನಮೃತ, ಬಸವನಗುಡಿ ಇವರು ದಾಸರ ಪದಗಳನ್ನು ಹಾಡಿದರು. 12 ಗಂಟೆಗೆ ಮಹಾಮಂಗಳಾರತಿಯ ನಂತರ ತೀರ್ಥ, ಪ್ರಸಾದ ವಿನಿಯೋಗ ಮಾಡಲಾಯಿತು.
ಸಂಜೆ 7 ರಿಂದ 8 ರವರೆಗೆ ಶ್ರೀ ವಾದಿರಾಜ ಆಗ್ನಿಹೋತ್ರಿ ಅವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು ನಂತರ ಮಹಾಮಂಗಳಾರತಿ ಮಾಡಲಾಯಿತು.
ದಿನಾಂಕ 28-08-18 ಮಂಗಳವಾರದಂದು ಪ್ರಾತ: ಕಾಲ 8 ಗಂಟೆಗೆ, ಅಭಿಷೇಕ, ಅರ್ಚನೆ, ಪಾದಪೂಜೆ ಮತ್ತು ಕನಕಾಭಿಷೇಕ ಮಾಡಲಾಯಿತು. 10-30ಕ್ಕೆ ಶ್ರೀ ರಾಘವೇಂದ್ರ ಸ್ತೋತ್ರ ಪಠನೆ ಮತ್ತು ಪ್ರವಚನ ಮಾಡಲಾಯಿತು, ನಂತರ 12 ಗಂಟೆಗೆ ಮಹಾಮಂಗಳಾರತಿ ಮಾಡಲಾಯಿತು.
ಸಂಜೆ 7 ಗಂಟೆಯಿಂದ 8-15 ರವರೆಗೆ ಶ್ರೀಯುತ ವಾದಿರಾಜ ಆಗ್ನಿಹೋತ್ರಿ ಅವರಿಂದ ಪ್ರವಚನ ಮುಗಿದ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.
ದಿನಾಂಕ 29-08-18 ಬುಧವಾರದಂದು ಪ್ರಾತ: ಕಾಲ 9 ಗಂಟೆಯಿಂದ ಅಭಿಷೇಕ, ಅರ್ಚನೆ, ಪಾದಪೂಜೆ ಮತ್ತು ಕನಕಾಭಿಷೇಕ ಮಾಡಲಾಯಿತು. ನಂತರ ಪೈಪ್‍ಲೇನ್ ಮತ್ತು ಶೇಷಾದ್ರಿಪುರದ ಮುಖ್ಯ ರಸ್ತೆಗಳಲ್ಲಿ ಗುರುಸಾರ್ವಭೌಮರ ರಥೋತ್ಸವವನ್ನು ನಡೆಸಲಾಯಿತು. ರಥೋತ್ಸವದ ನಂತರ ಡಾ. ವಿದ್ವಾನ್ ಚಿಂಪಲ್ಲಿ ರಮೇಶ್ ಮತ್ತು ವೃಂದದವರಿಂದ ಸಂಗೀತ ಕಾರ್ಯಕ್ರಮ ನಡೆಸಲಾಯಿತು. ಸಂಗೀತ ಕಾರ್ಯಕ್ರಮದ ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು.
ಸಂಜೆ 7 ಗಂಟೆಯಿಂದ 8-15 ರವರೆಗೆ ಶ್ರೀಯುತ ವಾದರಾಜ ಆಗ್ನಿಹೋತ್ರಿ ಅವರಿಂದ ಪ್ರವಚನ, ಪ್ರವಚನದ ನಂತರ ಮಹಾಮಂಗಳಾರತಿ ಮಾಡಲಾಯಿತು. ಮೂರು ದಿನಗಳು ಅನ್ನ ಸಂತರ್ಪಣೆಯೂ ನಡೆಯಿತು.
ಮೂರು ದಿನಗಳ ಕಾಲ ನಡೆದ ಶ್ರೀ ಗುರುಸಾರ್ವಭೌಮರ ಆರಾಧನಾ ಮಹೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಗುರು ರಾಯರ ಕೃಪೆಗೆ ಪಾತ್ರರಾದರು.
————————————————————————————

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ