ಆರೋಗ್ಯ ಮಾತೆಯ ರಥೋತ್ಸವ; ಸಂಚಾರ ನಿಷೇಧ

Varta Mitra News

ಬೆಂಗಳೂರು, ಸೆ.6- ಆರೋಗ್ಯ ಮಾತೆಯ ರಥೋತ್ಸವದ ಅಂಗವಾಗಿ ಸೆ.8ರಂದು ರೆಸೆಲ್ ಮಾರ್ಕೆಟ್‍ನಿಂದ ಜ್ಯೋತಿ ಕೆಫೆವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಬ್ರಾಡ್ ವೇ ರಸ್ತೆಯಲ್ಲಿ ರಸೆಲ್ ಮಾರ್ಕೆಟ್ ಕಡೆಗೆ ಹಾಗೂ ರಸೆಲ್ ಮಾರ್ಕೆಟ್‍ನಿಂದ ಬ್ರಾಡ್ ವೇ ರಸ್ತೆವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು , ಕಾಮರಾಜ ರಸ್ತೆ ಪಾರ್ಕಿಂಗ್ ಸ್ಥಳ , ಸಫೀನಾ ಪ್ಲಾಜಾ ಮುಂಭಾಗ, ಜಸ್ಮಾ ಭವನ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.
ಬಾಳೆಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿಎಂಟಿಸಿ ಸಹಿತ ಎಲ್ಲಾ ತರಹದ ವಾಹನಗಳನ್ನು ಅಂದು ಮಧ್ಯಾಹ್ನ 2 ಗಂಟೆಯ ನಂತರ ಸಂಚಾರವನ್ನು ನಿಷೇಧಿಸಲಾಗಿದೆ.
ಬಿಆರ್‍ವಿ ಜಂಕ್ಷನ್‍ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ವಾಹನಗಳನ ಸಂಚಾರವನ್ನು ನಿಷೇಧಿಸಲಾಗಿದೆ. ಅಂದು ಬೆಳಗ್ಗೆ 12 ಗಂಟೆಯಿಂದ ರಾತ್ರಿ 10ರವರೆಗೆ ಈ ನಿರ್ಬಂಧ ಜಾರಿಯಲ್ಲಿದ್ದು , ಸಾರ್ವಜನಿಕರು ಸಹಕರಿಸಬೇಕಾಗಿ ಪೆÇಲೀಸರು ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ