ಬೆಂಗಳೂರು,ಸೆ.5- ರಾಜ್ಯದಲ್ಲಿ ಕೃಷಿ ಕ್ಷೇತ್ರವು ಸಂಕಷ್ಟದಲ್ಲಿದೆ. ಇಲ್ಲಿನ ಸಮಸ್ಯೆ ಪರಿಹರಿಸಿ ಅಭಿವೃದ್ದಿಪಡಿಸಲು ಬದ್ದವಾಗಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ನಿಮ್ಹಾನ್ಸ್ನ ಕನ್ವೆಂಷನ್ ಸೆಂಟರ್ನಲ್ಲಿ ಇಂಡಿಯನ್ ಟೆಕ್ನಾಲಜಿಸ್ ಕಾಂಗ್ರೆಸ್ ಹಮ್ಮಿಕೊಂಡಿದ್ದು ಟೆಕ್ನಲಜೀಸ್ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರವನ್ನು ಅಭಿವೃದ್ದಿಪಡಿಸಲು ತಂತ್ರಜ್ಞರಿಗೆ ಮುಕ್ತ ಆಹ್ವಾನ ನೀಡುತ್ತೇವೆ ಎಂದು ತಿಳಿಸಿದರು.
ಇಂಜಿನಯರ್ಗಳು, ತಂತ್ರಜ್ಞರು ಕರ್ನಾಟಕದಲ್ಲಿ ಅಪಾರವಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಲು ಮಾನ್ಯತೆ ನೀಡುತ್ತಿದ್ದೇನೆ ಎಂದು ಹೇಳಿದರು.
ಕರ್ನಾಟಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸಂಶೋಧನೆ ಮಾಡಲು ಕೃಷಿ ಉತ್ಪನ್ನಗಳನ್ನು ಉತ್ಪಾದಿಸಲು ಮುಂದೆ ಬಂದರೆಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ತಂತ್ರಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎಲ್.ವಿ.ಮುರುಳಿ ಕೃಷ್ಣರೆಡ್ಡಿ, ಭಾರತೀಯ ಉತ್ಪದನಾ ಇಂಜಿನಿಯರ್ ಸಂಸ್ಥೆಯ ರಾಷ್ಟ್ರಾಧ್ಯಕ್ಷ ಡಾ.ವೂಡೆಪಿ.ಕೃಷ್ಣ, ರಾಷ್ಟ್ರೀಯ ಸಲಹಾ ಸಮಿತಿ ಅಧ್ಯಕ್ಷ ಪೆÇ್ರ.ಆರ್.ಎಂ.ವಾಸಗಂ, ಭಾರತೀಯ ವಿವಿಯ ಸಹಯೋಗ ಅಧ್ಯಕ್ಷ ಡಾ.ಸಂದೀಪ್ ಸಂಚಿತಿ ಮತ್ತಿತರರು ಪಾಲ್ಗೊಂಡಿದ್ದರು.