ಅಂದಿನ ಶಿಕ್ಷಕರು ಮೇಧಾವಿಗಳು ಮತ್ತು ಘನವೆತ್ತ ಶಿಕರ್ಷಕಾಗಿದ್ದರು.

ಬೆಂಗಳೂರು,ಸೆ.5- ಅಂದಿನ ಶಿಕ್ಷಕರು ಮೇಧಾವಿಗಳು ಮತ್ತು ಘನವೆತ್ತ ಶಿಕರ್ಷಕಾಗಿದ್ದರು. ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೊಡುವ ಘನ ಉದ್ದೇಶ ಅವರಿಗಿತ್ತು ಎಂದು ಪೆÇ್ರ.ಎಸ್.ಶೆಟ್ಟರ್ ಹೇಳಿದರು.
ವೈಸ್ ಚಾನ್ಸಲರ್ ಫೆÇೀರಂನಲ್ಲಿಂದು ಎಫ್‍ವಿಸಿಕೆ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂದಿನ ಶಿಕ್ಷಣ ವ್ಯವಸ್ಥೆಗೂ ಈಗಿನ ಶಿಕ್ಷಣ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ತಿಳಿಸಿದರು.
ಅಂದಿನ ವಿಶ್ವವಿದ್ಯಾಲಯದ ವಿವಿಧ ಅಂಗಳಾದ ಶಿಕ್ಷಣ ಪರಿಷತ್, ಸಿಂಡಿಕೇಟ್ ಮಹತ್ವವಾಗಿದ್ದವು. ಶಿಕ್ಷಣವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಅವುಗಳ ಪಾತ್ರ ಹಿರಿದಾಗಿತ್ತು ಎಂದರು.

ಅಂದಿನ ಕುಲಪತಿಗಳು ಹಾಗೂ ಕುಲ ಸಚಿವರು ಶ್ರೇಷ್ಠ ಮಟ್ಟದಲ್ಲಿ ವಿದ್ವತ್ ಗಳಿಸಿರುತ್ತಿದ್ದರು. ಉತ್ತಮ ಮಟ್ಟದ ಜ್ಞಾನ ಬೋಧನೆ ಹಾಗೂ ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಒತ್ತು ಕೊಡುತ್ತಿದ್ದರು.
ಕರ್ನಾಟಕ ವಿವಿ ಕುಲಪತಿಗಳಾಗಿದ್ದ ಪೆÇ್ರ.ಡಿ.ಎಂ.ನಂಜುಂಡಪ್ಪನವರ ಧ್ಯೇಯ, ಅವರ ವಿದ್ವತ್, ವಾಗ್ಮೀಯತೆ, ಆಡಳಿತ ನಡೆಸುತ್ತಿದ್ದ ರೀತಿ ವಿಶ್ವವಿದ್ಯಾಲಯ ಕಟ್ಟುವಿಕೆಗೆ ಅವರು ಕೊಟ್ಟ ಮಹತ್ವ ಅಪಾರವಾದುದು ಹಾಗೂ ಮಂಗಳೂರು ವಿವಿ ಕುಲಪತಿಗಳಾಗಿದ್ದ ಪೆÇ್ರ.ವಿ.ಶೇಖ್ ಆಲಿ ಅವರು ಘನ ವಿದ್ವಾಂಸರು ಹೆಸರಾಂತ ಶ್ರೇಷ್ಠ ಮಟ್ಟದ ಶಿಕ್ಷಣ ತಜ್ಞರಾಗಿದ್ದರು. ಅಂತಹ ವಿದ್ವಾನರುಗಳನ್ನು ಇಂದಿನ ದಿನಗಳಲ್ಲಿ ಸಿಗುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.

ಇಂದಿನ ದಿನಗಳಲ್ಲಿ ಕುಲಪತಿಗಳ ನೇಮಕಾತಿಯನ್ನು ಅವಲೋಕಿಸಿದರೆ ಬೇಸರವಾಗುತ್ತಿದೆ. ಯಾರ್ಯಾರೊ ಪ್ರಾಧ್ಯಾಪಕರು ಈ ಹುದ್ದೆಗೆ ಏರಲು ಲಾಬಿ ನಡೆಸುತ್ತಾರೆ. ಅರ್ಹತೆ ಇಲ್ಲದವರೆಲ್ಲ ಕುಲಪತಿಗಳಾಗಲು ಯತ್ನಿಸುತ್ತಾರೆ. ಇದೆಂಥ ವಿಪರ್ಯಾಸ ಎಂದು ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಡಾ.ರಾಧಾಕೃಷ್ಣನ್‍ರಂತಹ ಶ್ರೇಷ್ಠ ಮಟ್ಟದ ತತ್ವಜ್ಞಾನಿ, ಶಿಕ್ಷಣ ತಜ್ಞ, ದಾರ್ಶನಿಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಪೆÇ್ರ.ಜಿ.ಕೆ.ವೀರೇಶ್, ನಾಡೋಜ ಪೆÇ್ರ.ಕಮಲಾಹಂಪನ ಮತ್ತು ಪೆÇ್ರ.ಎಸ್.ಎನ್.ಹೆಗ್ಡೆ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪೆÇ್ರ.ಎಸ್.ಎ.ಕೋರಿ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ