ಬೆಂಗಳೂರು, ಸೆ.4-ಕೋರಮಂಗಲದ ಡಾ.ವಿಷ್ಣುಸೇನಾ ಸಮಿತಿ ವತಿಯಿಂದ ಕನ್ನಡರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.17ರಂದು ಸಂಜೆ 4.30ಕ್ಕೆ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಅವರ ನೆನಪಿನಲ್ಲಿ ಪ್ರತಿ ವರ್ಷ ನೈಜ ಕನ್ನಡಪರ ಹೋರಾಟಗಾರರಿಗೆ ಕನ್ನಡರತ್ನ ಎಂಬ ಪ್ರಶಸ್ತಿಯನ್ನು ನೀಡುತ್ತಿದ್ದು, 2016ನೇ ಸಾಲಿನ ಕನ್ನಡರತ್ನ ಪ್ರಶಸ್ತಿಯನ್ನು ಹಿರಿಯ ಕನ್ನಡಪರ ಹೋರಾಟಗಾರರು ಮತ್ತು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ದೇ.ಪಾಶ್ರ್ವನಾಥ ಹಾಗೂ 2017ನೆ ಸಾಲಿನ ಕನ್ನಡ ರತ್ನ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕನ್ನಡ ಕ್ರಿಯಾ ಸಮತಿ ಅಧ್ಯಕ್ಷರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡ ಅವರಿಗೆ ನೀಡಲಾಗುತ್ತಿದೆ.
2018ನೇ ಸಾಲಿನ ಕನ್ನಡರತ್ನ ಪ್ರಶಸ್ತಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕದ ಅಧ್ಯಕ್ಷರು, ಗಾಯಕರು ಹಾಗೂ ಖ್ಯಾತ ವಾಗ್ಮಿಗಳಾದ ಡಾ.ಶರಣು ಬಿ ಗದ್ದುಗೆಯವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಪ್ರಶಸ್ತಿ ಫಲಕ, ಫಲತಾಂಬೂಲ ಮತ್ತು ನಗದನ್ನು ಒಳಗೊಂಡಿದೆ ಎಂದು ಡಾ.ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.