
ಬೆಂಗಳೂರು, ಸೆ.4-ಶಿವಮೊಗ್ಗದ ಕಲಾಸಂಸ್ಥೆ ಕಲಾಜ್ಯೋತಿ ಆಶ್ರಯದಲ್ಲಿ ಕೇರಳ ಮತ್ತು ಕೊಡಗು ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ಹಾಸ್ಯ ಕಾರ್ಯಕ್ರಮವನ್ನು ಇಂದು ಸಂಜೆ 6 ರಿಂದ 9 ಗಂಟೆಯವರೆಗೆ ನಗರದ ಮಲ್ಲೇಶ್ವರಂ 14ನೇ ಕ್ರಾಸ್ನಲ್ಲಿರುವ ಸೇವಾ ಸದನದಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡುವ ಗೊಂಬೆ ಖ್ಯಾತಿಯ ಇಂದುಶ್ರೀ, ಹನಿಗವನ ಸರದಾರ ಡುಂಡಿರಾಜ್, ಖ್ಯಾತ ನಟ ಬಾಬು ಹಿರಣ್ಣಯ್ಯ, ಅಣಕು ರಾಮನಾಥ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ವಿ.ರಮೇಶ್ ಜೋಯಿಷ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೈಸರ್ಗಿಕ ವಿಕೋಪಗಳಿಗೆ ತುತ್ತಾದವರಿಗೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.