ಪೇಟಿಯಂನಿಂದ ಹೊಸ ಆ್ಯಪ್

ಬೆಂಗಳೂರು, ಸೆ.4- ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡುವ ಪೇಟಿಯಂ ಮನಿ ಸಂಸ್ಥೆ ಈಗ ಮ್ಯೂಚುಯಲ್ ಫಂಡ್ ಹೂಡಿಕೆ ಸುಲಭಗೊಳಿಸಲು ಹೊಸ ಆ್ಯಪ್‍ಅನ್ನು ಇಂದು ಲೋಕಾರ್ಪಣೆಗೊಳಿಸಿದೆ.
ಭಾರತದಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆದಾರರ ಸಂಖ್ಯೆಯನ್ನು ಮುಂದಿನ ಐದು ವರ್ಷಗಳಲ್ಲಿ ದುಪ್ಪಟ್ಟುಗೊಳಿಸುವ ಗುರಿಯನ್ನು ಹೊಂದಿದೆ ಎಂದು ಕಂಪೆನಿ ನಿರ್ದೇಶಕ ಪ್ರವೀಣ್ ಜಾದವ್ ತಿಳಿಸಿದ್ದಾರೆ.
ಹೂಡಿಕೆಯನ್ನು ಸರಳ, ಸುಲಭ ಹಾಗೂ ಪಾರದರ್ಶಕಗೊಳಿಸುವುದು ನಮ್ಮ ಗುರಿಯಾಗಿದೆ. ಎಲ್ಲರಿಗೂ ಮ್ಯೂಚುಯಲ್ ಫಂಡ್ ಯೋಜನೆ ಕೈಗೆಟಕುವಂತೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಸಂಪೂರ್ಣವಾಗಿ ಈ ಸೇವೆಯನ್ನು ಉಚಿತವಾಗಿ ನೀಡಲು ನಾವು ಇಚ್ಛಿಸಿದ್ದೇವೆ ಎಂದರು.
ಪೇಟಿಯಂ ಮನಿಯ ಸೇವೆಗಳು ತಂತ್ರಜ್ಞಾನ ಆಧಾರಿತವಾಗಿದ್ದು, ಈಗಾಗಲೇ ಈ ಹೊಸ ಆ್ಯಪ್ ಬಿಡುಗಡೆ ಹಾಗೂ ಯೋಜನೆಗೆ ಸಿಬಿಯ ಬಂಡವಾಳ ಹೂಡಿಕೆ ಸಲಹಾ ಸಮಿತಿ ಒಪ್ಪಿಗೆ ಸೂಚಿಸಿದೆ. ಹೀಗಾಗಿ ನಮ್ಮ ಸೇವೆಯನ್ನು ವಿಸ್ತರಿಸಲು ಬಯಸಿದ್ದೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ