ಬೆಂಗಳೂರು ಬ್ರಾಂಡೆಡ್ ನೆಟ್‍ವರ್ಕ್ ಪ್ರೈವೇಟ್ ಲಿಮಿಟೆಡ್ ನಿಂದ ಉಚಿತ ಇಂಟರ್‍ನೆಟ್ ಸೇವೆ

 

ಬೆಂಗಳೂರು, ಸೆ.4-ಇದೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಬೆಂಗಳೂರು ಬ್ರಾಂಡೆಡ್ ನೆಟ್‍ವರ್ಕ್ ಪ್ರೈವೇಟ್ ಲಿಮಿಟೆಡ್ ಶಿಕ್ಷಾ ಹೆಸರಿನ ಉಚಿತ ಇಂಟರ್‍ನೆಟ್ ಸೇವೆ ಆರಂಭಿಸಲು ಮುಂದಾಗಿದೆ ಎಂದು ಕಂಪೆನಿ ಮುಖ್ಯಸ್ಥ ಅರುಣ್ ಚಕ್ರಪಾಣಿರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಾಳೆ ಶಿಕ್ಷಕರ ದಿನಾಚರಣೆ ಅಂಗವಾಗಿ ಇಂಟರ್‍ನೆಟ್ ಸೇವೆಯನ್ನು ಸಮರ್ಪಿಸಲಾಗುವುದು. ಇದರಲ್ಲಿ ಅನಗತ್ಯ ವಿಷಯಗಳು ಅಂತರ್ಜಾಲದಲ್ಲಿ ಪ್ರವೇಶಿಸದಂತೆ ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು.
ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿ ಅಂದಾಜು 300ಕ್ಕೂ ಹೆಚ್ಚು ಕೇಬಲ್ ಆಪರೇಟರ್‍ಗಳ ಮೂಲಕ ಇಂಟರ್‍ನೆಟ್ ಸೇವೆ ಒದಗಿಸಲಾಗುವುದು ಎಂದರು.
ಈ ಇಂಟರ್‍ನೆಟ್‍ನಲ್ಲಿ ಪ್ರಮುಖವಾಗಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಪೂರೈಸಲಾಗಿದ್ದು, ಇದರಲ್ಲಿ ಯಾವುದೇ ಅಶ್ಲೀಲ ಸಂಬಂಧ ಸೇವೆ ಸಂಪರ್ಕ ಲಭ್ಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಇಂಟರ್‍ನೆಟ್ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಗತ್ಯವಾಗಲಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ