ರಾಜರಾಜೇಶ್ವರಿ ನಗರ, ಸೆ.4- ವ್ಯವಸಾಯವನ್ನು ಲಾಭದಾಯಕವಾಗಿಸಲು ರೈತರ ಒಡನಾಡಿಯಾಗಿ ಕೆಲಸ ಮಾಡುವ ಮೂಲಕ ಕೃಷಿಕರ ಕಲ್ಯಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಾವರೆಕೆರೆ ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷ ಟಿ.ಎಲï. ಕೆಂಪೇಗೌಡ ತಿಳಿಸಿದರು.
ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ನಿರ್ದೇಶಕರಿಗೆ ಹಾಗೂ ರೈತರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ದೇಶದ ಬೆನ್ನೆಲುಬಾಗಿರುವ ರೈತರಿಗೆ ಉತ್ತಮ ಬಿತ್ತನೆ ಬೀಜ, ರಸಗೊಬ್ಬರ , ಮಣ್ಣಿನ ಪರೀಕ್ಷೆ ಮೂಲಕ ಬೆಳೆ ಬೆಳೆಯಲು ಸಲಹೆ ಹಾಗೂ ಕೃಷಿ ಸಾಲ, ಉ¥ ಕಸುಬು ಹೈನುಗಾರಿಕೆಗೆ ಉತ್ತೇಜನ ನೀಡುವ ಮೂಲಕ ರೈತರ ಜೀವನಮಟ್ಟ ಸುಧಾರಣೆ ಹಾಗೂ ಆರ್ಥಿಕ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದರು.
ಜಿ.ಪಂ.ಸದಸ್ಯ ಹನುಮಂತಯ್ಯ, ಸಂಘದ ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷೆ ಸಿ.ತುಳಸಮ್ಮ, ನಿರ್ದೇಶಕ ನಾರಾಯಣï, ಮುಖಂಡರಾದ ಕುಬೇರಸ್ವಾಮಿ, ಲಕ್ಷ್ಮೀಶ್ಗೌಡ, ಮಂಜುನಾಥ್ ಮತ್ತಿತರರಿದ್ದರು.