ಕೊಯಿಮತ್ತೂರ್: ಹನಿಮೂನ್ಗಾಗಿ ವಿಭಿನ್ನ ಪ್ಲಾನ್ಗಳನ್ನು ಮಾಡಿ ಹಲವರು ಸುದ್ದಿಯಾಗಿದ್ದಾರೆ. ವೈವಾಹಿಕ ಜೀವನದ ಆರಂಭಿಕ ದಿನಗಳನ್ನು ಕಳೆಯಲು ಸ್ಪೆಷಲ್ ಯೋಜನೆ ಮಾಡುವ ಜೋಡಿಗಳ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಇಲ್ಲೊಂದು ಜೋಡಿ ಹನಿಮೂನ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಬ್ರಿಟಿಷ್ ಮೂಲದ ಜೋಡಿ ಹನಿಮೂನ್ಗಾಗಿ ತಮಿಳುನಾಡಿನ ಊಟಿಯನ್ನು ಆರಿಸಿಕೊಂಡಿದ್ದರು. ಮೆಟ್ಟುಪಾಳ್ಯಂ ರೈಲು ನಿಲ್ದಾಣದಿಂದ ಉದಕಮಂಡಲ(ಊಟಿ)ಗೆ ತೆರಳುವ ರೈಲನ್ನು ಬುಕ್ ಮಾಡಿದ್ದರು. ಇದಿಷ್ಟೇ ಆಗಿದ್ದರೆ ಇದರಲ್ಲಿ ವಿಶೇಷ ಏನೂ ಇರುತ್ತಿರಲಿಲ್ಲ. ಆದರೆ ಈ ಜೋಡಿ ಒಂದಿಡೀ ರೈಲನ್ನೇ ಬುಕ್ ಮಾಡಿದ್ದರು.
ಗ್ರಹಾಂ ವಿಲಿಯಂ ಲಿನ್ ಹಾಗೂ ಸಿಲ್ವಿಯ ಪ್ಲಾಸಿಕ್ ಜೋಡಿ ಬರೋಬ್ಬರಿ ಮೂರು ಲಕ್ಷ ತೆತ್ತು ಸಂಪೂರ್ಣ ರೈಲನ್ನು ಬುಕ್ ಮಾಡಿದ್ದರು. ಈ ರೀತಿಯಾಗಿ ಒಂದಿಡೀ ರೈಲು ಬುಕ್ ಮಾಡಿರುವ ಘಟನೆ ಇದೇ ಮೊದಲಾಗಿದೆ. ಮೆಟ್ಟುಪಾಳ್ಯಂನಿಂದ ಬೆಳಗ್ಗೆ 9.10ಕ್ಕೆ ಹೊರಟಿದ್ದ ರೈಲು ಮಧ್ಯಾಹ್ನ 2.10ಕ್ಕೆ ಊಟಿ ತಲುಪಿದೆ.