ಚಾಮರಾಜನಗರ,ಸೆ.3- ಗಡಿಜಿಲ್ಲೆ ಚಾಮರಾಜನಗರದ ನಗರಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಮೇಲುಗೈ ಸಾಧಿಸಿದ್ದುಘಿ, ಹಾಲಿ ಸಚಿವ ಪುಟ್ಟರಂಗ ಶೆಟ್ಟಿಗೆ ಮುಖಭಂಗವಾಗಿದೆ.
ಒಟ್ಟು ನಗರಸಭೆಯ 31 ವಾರ್ಡ್ಗಳ ಪೈಕಿ ಬಿಜೆಪಿ 15 ಸ್ಥಾನಗಳನ್ನು ಗೆದ್ದಿದ್ದರೆ ಕಾಂಗ್ರೆಸ್ 7 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 5 ವಾರ್ಡ್ಗಳಲ್ಲಿ ಗೆಲುವಿನ ಕೇಕೆ ಹಾಕಿದ್ದರೆ ಉಳಿದ ವಾರ್ಡ್ಗಳು ಪಕ್ಷೇತರರ ಪಾಲಾಗಿವೆ.
ಸಚಿವ ಪುಟ್ಟರಂಗ ಶೆಟ್ಟಿ ಅವರ ಸ್ವಕ್ಷೇತ್ರವಾದ ಚಾಮರಾಜನಗರದಲ್ಲೇ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವಿÀಲವಾಗಿರುವುದರಿಂದ ಭಾರೀ ಮುಖಭಂಗವಾಗಿದೆ ಎಂದೇ ಹೇಳಲಾಗುತ್ತಿದೆ.
ಅಚ್ಚರಿ ಎಂಬಂತೆ ಈ ಬಾರಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯುವತ್ತ ದಾಪುಗಾಲು ಇಟ್ಟಿದೆ. ಬಿಜೆಪಿಗೆ ಇನ್ನು ಕೇವಲ ಓರ್ವ ಅಭ್ಯರ್ಥಿಯ ಬೆಂಬಲದ ಅಗತ್ಯವಿದೆ.