ನಾಡಹಬ್ಬ ದಸರಾ ಮಹೋತ್ಸವು ಅ.10ರಿಂದ ಆರಂಭ

Varta Mitra News

ಮೈಸೂರು,ಸೆ.3-ನಾಡಹಬ್ಬ ದಸರಾ ಮಹೋತ್ಸವು ಅ.10ರಿಂದ ಆರಂಭವಾಗಲಿದ್ದು, ಅದಕ್ಕಾಗಿ ಆಕರ್ಷಣೀಯ ಕೇಂದ್ರಗಳಲ್ಲೊಂದಾದ ಕುಪ್ಪನ ಪಾರ್ಕ್‍ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ದತೆ ನಡೆದಿದೆ.
ಈ ಬಾರಿ ಅ.10ರಿಂದ 21ರವರೆಗೂ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, 80 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ವಿವಿಧ ರೀತಿಯ ಗಿಡಗಳನ್ನು ಬೆಳೆಸಲಾಗಿದೆ. ಈ ಕುಂಡಗಳನ್ನು ಬಳಸಿ ವಿವಿಧ ಆಕೃತಿಗಳನ್ನು ಸಿದ್ದಪಡಿಸಲಾಗುತ್ತಿದೆ.
ವಿವಿಧ ಬಣ್ಣಗಳ ಹೂವುಗಳು ನೋಡುಗರನ್ನು ಸೆಳೆಯಲಿದೆ. ವರ್ಭನ್, ಬಿಗೊನಿಯ, ಡಾಲಿಯ, ಫ್ರೆಂಚ್ ಮೇರಿ ಗೌಲ್ಡ್, ಜೀನಿಯಾ ಸೇರಿದಂತೆ 40ಕ್ಕೂ ಹೆಚ್ಚು ತಳಿಯ ಗಿಡಗಳನ್ನು ಈ ಬಾರಿ ಪ್ರದರ್ಶನಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಈ ಗಿಡಗಳು 150 ದಿನಗಳ ನಂತರ ನಯವಾಗಿ ಹೂವು ಬಿಡಲಾರಂಭಿಸುತ್ತದೆ. ಹಾಗಾಗಿ ಏಪ್ರಿಲ್, ಮೇ ತಿಂಗಳಲ್ಲಿ ಈ ತಳಿಯ ಬೀಜವನ್ನು ನೆಟ್ಟು ಪೆÇೀಷಿಸಲಾಗಿದೆ. ದಸರಾ ವೇಳೆಗೆ ಹೂವು ಬಿಡುತ್ತವೆ.
ಈ ಬಾರಿಯಫಲಪುಷ್ಪ ಪ್ರದರ್ಶನದಲ್ಲಿ 3.5 ಲಕ್ಷ ಗುಲಾಬಿ ಹೂವುಗಳನ್ನು ಬೆಳೆಸಿ ಅದರಿಂದ ಸೋಮನಾಥಪುರದ ಚನ್ನಕೇಶವ ದೇವಾಲಯ ಹಾಗೂ ದೊಡ್ಡ ಗಡಿಯಾರ ಸೇರಿದಂತೆ ವಿವಿಧ ಕಲಾಕೃತಿಗಳನ್ನು ಮಾಡಲಾಗುತ್ತಿದೆ.
ಗ್ಲಾಸ್ ಹೌಸ್ ಸಹ ಸಿದ್ದವಾಗಿದ್ದುಘಿ, ಇಲ್ಲು ಕೂಡ ವಿವಿಧ ರೀತಿಯ ಹೂವುಗಳು ಪ್ರವಾಸಿಗರನ್ನು ಆಕರ್ಷಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ