ರಂಗಾರೆಡ್ಡಿ ಜಿಲ್ಲೆ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಪಕ್ಷದ ಕಾರ್ಯಕರ್ತರು ಶ್ರೀರಾಮನ ಅವತಾರದಲ್ಲಿ ಮುದ್ರಿಸಿ, ಬೃಹತ್ ಕತೌಟ್ ಒಂದನ್ನು ಹಾಕಿದ್ದಾರೆ.
ಟಿಆರ್ಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ(ಸೆ. 2ರಂದು) ನಾಲ್ಕು ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೃಹತ್ ರ್ಯಾಲಿಯನ್ನೂ ಪಕ್ಷ ಹಮ್ಮಿಕೊಂಡಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ ರ್ಯಾಲಿ ಆಯೋಜಿಸಲಾಗಿದ್ದು, ನಗರದಲ್ಲಿ ಬೃಹತ್ ಫ್ಲೆಕ್ಸ್ಅನ್ನು ಪಕ್ಷದ ಕಾರ್ಯಕರ್ತರು ನಿರ್ಮಿಸಿದ್ದಾರೆ.
ಫ್ಲೆಕ್ಸ್ನಲ್ಲಿ ರಾಮನ ಅವತಾರದಲ್ಲಿರುವ ಚಂದ್ರಶೇಖರ್ ರಾವ್ ಕೈಯಲ್ಲಿ ಬಿಲ್ಲು, ಬೆನ್ನಿಗೆ ಬಾಣಗಳನ್ನು ಪೇರಿಸಿರುವ, ತಲೆಯ ಮೇಲೆ ಕಿರೀಟ, ಹಳದಿ ಕಚ್ಚೆಪಂಚೆ, ಕೆಂಗುಲಾಬಿಯ ಶಲ್ಯ, ರಾಜಪೋಷಾಕಿನ ಪಾದುಕೆ ಧರಿಸಿರುವಂತೆ ಬಿಂಬಿಸಲಾಗಿದೆ.