ಎನ್‌ಡಿಎ ಅಕ್ರಮ ಅಕ್ಟೋಬರ್‌ನಲ್ಲಿ ಜನಜಾಗೃತಿ ಸಮಾವೇಶ: ವೇಣುಗೋಪಾಲ್

ಬೆಂಗಳೂರು: ಕೇಂದ್ರದ ಎನ್‌ಡಿಎ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೇಶಾದ್ಯಂತ ಅಕ್ಟೋಬರ್ ತಿಂಗಳಾದ್ಯಂತ ಜಿಲ್ಲಾ ಮಟ್ಟದ ಸಮಾವೇಶ ನಡೆಸಲಿದ್ದೇವೆ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರಸರ್ಕಾರ ಸಾಕಷ್ಟು ಭ್ರಷ್ಟಾಚಾರ, ಅನಾಚಾರ ನಡೆಸಿದೆ. ಅದನ್ನು ಜನರಿಗೆ ತಿಳಿಸುತ್ತೇವೆ. ಸಾವಿರಾರು ಕೋಟಿ ಮೊತ್ತದ ರಫೆಲ್ ಹಗರಣವನ್ನು ನಗಣ್ಯವಾಗಿಸಿ, ಯುಪಿಎ ಅವಧಿಯ ಹಗರಣಗಳ ಬಗ್ಗೆ ಮಾತನಾಡಲಿದ್ದಾರೆ. ಜನವಿರೋಧಿ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದೇವೆ ಎಂದರು.

ಇದಲ್ಲದೇ ಸೆ.6 ರಿಂದ 15 ದಿನ ಕೇಂದ್ರ ಸರ್ಕಾರದ ಅಕ್ರಮ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಜಾಗೃತಿ ಮೂಡಿಸಲಿದ್ದೇವೆ. ಒಟ್ಟಾರೆ ರಾಜ್ಯದಲ್ಲಿ ರಫೆಲ್ ಹಾಗೂ ಇತರೆ ಭ್ರಷ್ಟಾಚಾರದ ಬಗ್ಗೆ ವಿವರ ನೀಡುತ್ತೇವೆ. ದೇಶದಲ್ಲಿ ಇದುವರೆಗೂ ಕಂಡರಿಯದ ಭ್ರಷ್ಟಾಚಾರ ನಾವು ಕಂಡಿದ್ದೇವೆ. ರಫೆಲ್ ಯುದ್ಧ ವಿಮಾನ ಕರೀದಿ ಹಗರಣ. ಸಾವಿರಾರು ಮಂದಿ ಯುವ ಬೆಂಗಳೂರಿಗರು ಪಡೆಯಬೇಕಿದ್ದ ಉದ್ಯೋಗ ಕಿತ್ತುಕೊಂಡಿದ್ದಾರೆ. ಫ್ರಾನ್ಸ್ ಕಂಪನಿಗೆ ವಿಮಾನ ಕರೀದಿಗೆ ಹಣ ನೀಡಿದೆ. ನಮ್ಮ ದೇಶ ಬಿಟ್ಟು ಬೇರೆ ದೇಶದಿಂದ ವಿಮಾನ ಕೊಳ್ಳುವಾಗ ಬೆಲೆ ಕಡಿಮೆ ಆಗಬೇಕು. ಯುಪಿಎ ಅವಧಿಯಲ್ಲಿ ವಿಮಾನ ಬೆಲೆ 526.1 ಕೋಟಿ ಇತ್ತು. ಈಗ 1360 ಕೋಟಿ ಈಗ ಆಗಿದೆ. ದಯವಿಟ್ಟು ಪ್ರಧಾನಿ, ರಕ್ಷಣಾ ಸಚಿವರು ಈ ಬಗ್ಗೆ ಜನರಿಗೆ ಉತಗತರ ನೀಡಬೇಕು. ಆದರೆ ಸಚಿವೆ ನಿರ್ಮಲಾ ಸೀತಾರಾಮನ್ ಸದನದ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ವಿಮಾನದ ಬೆಲೆ ಅವರು ತಿಳಿಸಲೇ ಬೇಕು. ನಮ್ಮ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ರಫೆಲ್ ವಿಮಾನ ಕರೀದಿಯ ಮೊತಗತ ತಿಳಿಸಬೇಕು. ನಾವು ಜೆಪಿಸಿ ತನಿಖೆಗೆ ಆಗ್ರಹಿಸುತ್ತಿದ್ದೇವೆ. ಸತ್ಯ ಹೊರ ಬರಲಿ. ಇದೊಂದು ದೊಡ್ಡ ಹಗರಣವಾಗಿದೆ. ನಾವು ಕೇಂದ್ರದ ಮೇಲೆ ತನಿಖೆಗೆ ಒತ್ತಡ ಹೇರುತ್ತಿದ್ದೇವೆ.

ಇದರ ವಿರುದ್ಧ ಕರ್ನಾಟಕದಲ್ಲಿ ಜಾಗೃತಿ ಹೋರಾಟ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಲ್ಲೂ ಮಾಸಾಂತ್ಯ ನಡೆಯಲಿದೆ. ರಾಜ್ಯದಲ್ಲಿ ನಮ್ಮ ಹೂರಾಟ ಮುಂದುವರಿಯಲಿದೆ ಎಂದರು.

ಕಪ್ಪು ಹಣ ಎಲ್ಲಿ…?

ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಪ್ರಧಾನಿ ನೀಡಿದ್ದ ಭರವಸೆ ಏನಾಯಿತು. ನೋಟ್ ಬ್ಯಾನ್ ಮೂಲಕ ಏನು ಸಾಧಿಸಿದಿರಿ. ನೂರಾರು ಮಂದಿ ಪ್ರಾಣ ಕಳೆದುಕೊಂಡರು. ಇದೂ ದೊಡ್ಡ ಮೋಸ. ಜನರ ಪ್ರಾಣ, ಉದ್ಯೋಗಕ್ಕೆ ಸಂಚಕಾರವಾದ ನೋಟ್ ಬ್ಯಾನ್ ನಿಂದ ಆದ ಪ್ರಯೋಜನ ತಿಳಿಸಿ. ಸರ್ಕಾರ ಈ ಬಗ್ಗೆ ವಿವರಿಸಬೇಕೆಂದು ಆಗ್ರಹಿಸಿದರು.

ಇಂಧನ ಬೆಲೆ;

ನಾವು ಉತ್ತಮ ಆರ್ಥಿಕ ಸ್ಥಿತಿ ಹೊಂದಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಇಂಧನ ಬೆಲೆ ನಿಯಂತ್ರಿಸಲು ಆಗಿಲ್ಲ. ಇಂಧನ ಹೆಸರಿನಲ್ಲಿ ಸರ್ಕಾರ ಜನರ ಲೂಟಿ ಮಾಡುತ್ತಿದೆ. ಈ ಸರ್ಕಾರದ ಕಾರ್ಯಕ್ರಮ, ಯೋಜನೆಗಳು ಕೇವಲ ಕಾರ್ಪೊರೇಟ್ ಕಂಪನಿ ಅನುಕೂಲಕ್ಕೆ ಆಗಿದೆ. ಬಡವರಿಗೆ ಅನುಕೂಲವಾಗುತ್ತಿಲ್ಲ. ಎನ್‌ಡಿಎ ಸರ್ಕಸರದ ಶ್ರೀಮಂತರ ಹಾಗೂ ಯುಪಿಎಯ ಬಡವರ ನಡುವಿನ ಹೋರಾಟವಾಗಿದೆ. ಯಾವ ಅಚ್ಚೇದಿನ ನಮಗೆ ಬಂತು. ಮುಂದಿನ ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಕೂಡ ಕೇಂದ್ರ ಸರ್ಕಾರದ ಅವ್ಯವಹಾರ, ಭ್ರಷ್ಟಾಚಾರ, ಜನ ವಿರೋಧಿ ತೀರ್ಮಾನಗಳ ವಿರುದ್ಧ ಹೋರಾಡಲಿದ್ದೇವೆ ಎಂದರು.

28 ಸ್ಥಾನ ಗೆಲ್ಲಲಿದ್ದೇವೆ:

ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಸ್ಥಾನ ಗೆಲ್ಲುತ್ತೇವೆ. ಜೆಡಿಎಸ್ ಜತೆ ಕೈಜೋಡಿಸಿ ಸ್ಪರ್ಧಿಸಲಿದ್ದೇವೆ. ಮೊದಲೇ ನಿರ್ಧಾರವಾಗಿದೆ. ನಾವು ಒಂದಾಗಿ ಸ್ಪರ್ಧಿಸಿ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ:

ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಕುಮಾರಸ್ವಾಮಿ ನೇತೃತ್ವದಲ್ಲಿ ಐದು ವರ್ಷ ಪೂರ್ಣಗೊಳಿಸಲಿದ್ದೇವೆ. ಸಂಶಯಬೇಡ. ಸಣ್ಣಪುಟ್ಟ ಬೇಸರ, ಅಸಮಾಧಾನ ಮೂಡುವುದು ಸಹಜ. ಅದನ್ನು ಪರಿಹರಿಸಲು ಸಮನ್ವಯ ಸಮಿತಿ ಇದೆ. ಸರ್ಕಾರದಲ್ಲಿ ಈಗ ಯಾವುದೇ ಅಸಮಾಧಾನ, ಬೇಸರ, ಗೊಂದಲ ಇಲ್ಲ. ಎಲ್ಲಾ ಸರಿಯಾಗಿ ನಡೆಯುತ್ತಿದೆ. ಅನಗತ್ಯವಾಗಿ ಅಪಪ್ರಚಾರ ಬೇಡ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ