ಬೆಂಗಳೂರು, ಸೆ.1-ಪುಣೆಯ ಎಟಿಎಸ್ ಅಧಿಕಾರಿಗಳು ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಲ್ಲಿ ಕೆಲವರ ವಿಚಾರಣೆ ನಡೆಸಿ, ಕೆಲವು ಮಾಹಿತಿಗಳನ್ನು ಪಡೆದಿದ್ದಾರೆ.
ಮಹಾರಾಷ್ಟ್ರದ ಮನೆಯೊಂದರಲ್ಲಿ ದೊರೆತ ಪಿಸ್ತೂಲು ಹಾಗೂ ಬಾಂಬ್ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ವಿಚಾರಣೆಯ ವೇಳೆ ಗೌರಿ ಹತ್ಯೆಯಲ್ಲಿ ಬಂಧಿತರಾಗಿರುವ ಕೆಲವು ಆರೋಪಿಗಳ ಹೆಸರು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಪುಣೆಯ ಎಟಿಎಸ್ ಅಧಿಕಾರಿಗಳು ಬೆಂಗಳೂರಿಗೆ ಬಂದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಾಂಬ್ ಮತ್ತು ಪಿಸ್ತೂಲ್ ದೊರೆತ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪುಣೆ ಪೆÇಲೀಸರು ಬಂಧಿಸಿದ್ದರು. ಇವರಲ್ಲಿ ಕೆಲವರು ಗೌರಿ ಹತ್ಯೆಯಲ್ಲಿ ಭಾಗಿಯಾದವರ ಹೆಸರನ್ನು ವಿಚಾರಣೆಯ ವೇಳೆ ತಿಳಿಸಿದ್ದರು. ಅದರಂತೆ ಎಟಿಎಸ್ ಅಧಿಕಾರಿಗಳು, ರಾಜ್ಯ ಪೆÇಲೀಸರನ್ನು ಸಂಪರ್ಕಿಸಿ ನಂತರ ಸಹಾಯ ಪಡೆದು ಗೌರಿ ಹತ್ಯೆಯ ಆರೋಪಿಗಳಲ್ಲಿ ಕೆಲವರನ್ನು ವಿಚಾರಣೆ ನಡೆಸಿ, ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಪುಣೆಯ ಎಟಿಎಸ್ ಅಧಿಕಾರಿಗಳು ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳನ್ನು ಭೇಟಿಯಾಗಿ ಕೆಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ.