ಕಡಲಾಚೆಯಲ್ಲಿ ಕನ್ನಡದ ಕಲರವ…

ಕಡಲಾಚೆಯಲ್ಲಿ ಕನ್ನಡದ ಕಲರವ… ಬೆಂಗಳೂರು, ಸೆ.1- ಕಡಲಾಚೆಯಲ್ಲಿ ಕನ್ನಡದ ಕಲರವ… ಅಕ್ಕ ಸಂಘಟನೆ ಕಳೆದ ಹತ್ತು ವರ್ಷಗಳಿಂದ ಅಮೆರಿಕದಲ್ಲಿ ಕನ್ನಡದ ಕಹಳೆ ಮೊಳಗಿಸುತ್ತ ಬಂದಿದೆ. ಅಲ್ಲಿರುವ ಕನ್ನಡ ಸಂಘಟನೆಗಳೆಲ್ಲ ಒಂದೇ ವೇದಿಕೆಯಡಿ ಸೇರಿ ಸಮ್ಮೇಳನ ನಡೆಸುತ್ತ ವಿದೇಶದಲ್ಲಿ ಕನ್ನಡ ನಾಡಿನ ಸಾಂಸ್ಕøತಿಕ ವೈಭವವನ್ನು ಮೆರೆಸುತ್ತ ಬಂದಿರುವುದು ಪ್ರಶಂಸನೀಯ.

ವಿಶ್ವಮಟ್ಟದಲ್ಲಿ ಕನ್ನಡದ ಧ್ವಜ ಹಾರಿಸುತ್ತಿರುವುದು, ಕನ್ನಡದ ಕಾಯಕ ಮಾಡುತ್ತಿರುವುದು, ಕನ್ನಡದ ಕಲೆ, ಸಾಹಿತ್ಯ ವೈಭವವನ್ನು ಅಮೆರಿಕದಲ್ಲಿರುವವರಿಗೆ ಉಣಬಡಿಸುತ್ತಿರುವ ಕೆಲಸವನ್ನು ಅಕ್ಕ ಸಂಘಟನೆ ನಿರಂತರವಾಗಿ ಮಾಡುತ್ತ ಬಂದಿದೆ.
ಪ್ರತಿ ವರ್ಷ ಹಬ್ಬದ ರೀತಿಯಲ್ಲಿ ಅಮೆರಿಕದಲ್ಲಿರುವ ಕನ್ನಡಿಗರು ಇದನ್ನು ಆಚರಿಸುತ್ತಾರೆ, ಸಂಭ್ರಮಿಸುತ್ತಾರೆ.

ಭಾರತದಲ್ಲಿರುವ ಕಲಾವಿದರು, ಚಿತ್ರನಟರು, ಗಣ್ಯರು, ಸಾಹಿತಿಗಳು, ಧಾರ್ಮಿಕ ಮುಖಂಡರು, ಕನ್ನಡ ಆಸಕ್ತರು, ಅಮೆರಿಕದಲ್ಲಿ ವಾಸವಾಗಿರುವವರ ಬಂಧುಗಳು ಎಲ್ಲರೂ ಅಲ್ಲಿಗೆ ತೆರಳಿ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ, ಸಂಭ್ರಮಿಸುತ್ತಾರೆ. ಸರ್ಕಾರ, ಸಂಘಟನೆಗಳು ಎಲ್ಲರೂ ಕೈ ಜೋಡಿಸುತ್ತಾರೆ. ಇದೇ ಅಲ್ಲವೇ ನಾಡು-ನುಡಿಗೆ ನಾವು ಸಲ್ಲಿಸುವ ಸೇವೆ.

ಹತ್ತನೆ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಡಲ್ಲಾಸ್ ನಗರದಲ್ಲಿ ಪ್ರಾರಂಭವಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ವಿಶುಕುಮಾರ್ ಸೇರಿ ಕೆಲ ಅಧಿಕಾರಿಗಳು ಸರ್ಕಾರದ ಪ್ರತಿನಿಧಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಆರು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಅಕ್ಕ ಅಧ್ಯಕ್ಷ ಶಿವಮೂರ್ತಿ ಕೀಲಾರ ಅವರು ತಿಳಿಸಿದ್ದಾರೆ. ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಅಕ್ಕ ಸಮ್ಮೇಳನಕ್ಕೆ ತೆರಳದಿರಲು ಸಚಿವರು ನಿರ್ಧರಿಸಿದ್ದಾರೆ.

ಅಕ್ಕ ಸಮ್ಮೇಳನದ ಉದ್ಘಾಟನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿತ್ತು. ಕೊಡಗು ಸೇರಿ ಹಲವೆಡೆ ನಡೆದ ಪ್ರವಾಹದ ಹಿನ್ನೆಲೆಯಲ್ಲಿ ಸಿಎಂ ಪ್ರವಾಸ ರದ್ದಾಗಿತ್ತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲಾ, ಸಣ್ಣ ನೀರಾವರಿ ಸಚಿವ ಪುಟ್ಟರಾಜು ಅವರನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದ್ದು, ಕೊನೆ ಕ್ಷಣದಲ್ಲಿ ಅವರ ಪ್ರವಾಸವೂ ರದ್ದಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ