ಪಶ್ಚಿಮ ವಿಭಾಗದ ಪೆÇಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 170 ಪ್ರಕರಣಗಳನ್ನು ಪತ್ತೆಹಚ್ಚಿ 55 ಮಂದಿ ಆರೋಪಿಗಳನ್ನು ಬಂಧಿಸಿ 1.68 ಕೋಟಿ ಮೊತ್ತದ ಮಾಲನ್ನು ವಶ

ಬೆಂಗಳೂರು, ಸೆ.1- ಪಶ್ಚಿಮ ವಿಭಾಗದ ಪೆÇಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 170 ಪ್ರಕರಣಗಳನ್ನು ಪತ್ತೆಹಚ್ಚಿ 55 ಮಂದಿ ಆರೋಪಿಗಳನ್ನು ಬಂಧಿಸಿ 1.68 ಕೋಟಿ ಮೊತ್ತದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್‍ನಲ್ಲಿ ರೌಡಿ ಆಸಾಮಿಗಳು ಸೇರಿದಂತೆ ದರೋಡೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ 20 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ಆರು ಕೊಲೆ ಪ್ರಕರಣ, ಒಂದು ಡಕಾಯಿತಿ, 12 ಸುಲಿಗೆ, 85 ಸರ ಅಪಹರಣ ಪ್ರಕರಣಗಳು, 12 ಕನ್ನಗಳವು, 13 ಮನೆಗಳವು, 24 ದ್ವಿಚಕ್ರ ವಾಹನ ಕಳವು, 120 ಮೊಬೈಲ್ ಕಳವು, 17 ಇತರೆ ಪ್ರಕರಣಗಳನ್ನು ಪತ್ತೆಹಚ್ಚಿರುವ ಪೆÇಲೀಸರು 1,68,99,560 ರೂ. ಮೊತ್ತದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವುಗಳಲ್ಲಿ 4038 ಗ್ರಾಂ ಚಿನ್ನದ ಆಭರಣಗಳು, 45 ಕೆಜಿ ಬೆಳ್ಳಿ ಸಾಮಾನುಗಳು, 5.60 ಲಕ್ಷ ನಗದು, 24 ದ್ವಿಚಕ್ರ ವಾಹನ, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ