ಬೆಂಗಳೂರು, ಸೆ.1- ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಹೊಸ ಆಯಾಮದ ವಿಶಿಷ್ಟ ನಾಟಕ ಸುಯೋಧನ ಈಗಾಗಲೇ 104 ಪ್ರದರ್ಶನಗಳನ್ನು ಕಂಡು ಅತ್ಯಂತ ಜನಪ್ರಿಯವಾಗಿದೆ.
ಈ ನಾಟಕದಲ್ಲಿ ದುರ್ಯೋಧನನೇ ನಾಯಕ. ಪ್ರತಿಯೊಂದು ಪಾತ್ರ-ಘಟನೆಗಳನ್ನು ತನ್ನ ಕಾರ್ಯಗಳನ್ನುಅವನು ತನ್ನ ದೃಷ್ಟಿಯಲ್ಲಿ ಸಮರ್ಥಿಸಿಕೊಳ್ಳುತ್ತಾನೆ. ಇಲ್ಲಿಯ ರಾಜಕಾರಣದಲ್ಲಿ ಕಂಡು ಬರುವ ಕೃಷ್ಣನ ಕಪಟ, ಶಕುನಿಯ ಕುತಂತ್ರ , ಸುಯೋಧನನ ಛಲ ಇವು ಮುಂದಿನ ರಾಜಕೀಯಕ್ಕೆ ಭದ್ರ ಬುನಾದಿಯೆನ್ನುವ ನಾಟಕದ ಮಾತು, ಅವರುಗಳ ನಡೆ ಇವತ್ತಿನ ರಾಜಕೀಯ ಪ್ರಸ್ತುತತೆಯನ್ನು ಎತ್ತಿಹಿಡಿಯುತ್ತದೆ. ನಾಟಕದಲ್ಲಿ ಪಾತ್ರ ಹೊಸದೃಷ್ಟಿಯಲ್ಲಿ ಚಿತ್ರಿತವಾಗಿದ್ದು, ಚಿಂತನ-ಮಂಥನಗಳಿಗೆ ಒತ್ತು ಕೊಡಲಾಗಿದೆ.
ಈ ನಾಟಕವನ್ನು ಹಿರಿಯ ರಂಗಕರ್ಮಿ ಎಸ್.ವಿ.ಕೃಷ್ಣ ಶರ್ಮ ರಚಿಸಿ ನಿರ್ದೇಶಿಸಿದ್ದಾರೆ.ಇಂದು ಮತ್ತು ನಾಳೆ ಹನುಮಂತನಗರದ ಕೆಹೆಚ್ ಕಲಾಸೌಧದಲ್ಲಿ ಸಂಜೆ 7.30ಕ್ಕೆ ಪ್ರದರ್ಶನ ಕಾಣುತ್ತಿದೆ.