ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನ ಒಂದು ತಿಂಗಳು ಬಾಕಿಯಿದ್ದು, ಈ ಹಿನ್ನೆಲೆ ನಾಳೆ ಗಜಪಡೆ ಮೈಸೂರಿಗೆ ಪ್ರಯಾಣ ಬೆಳೆಸಲಿವೆ.
ನಾಳೆ ಗಜಪಯಣ ಆರಂಭವಾಗಿದ್ದು ಇದಕ್ಕೆ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.
ನಾಳಿನ ಗಜಪಯಣಕ್ಕೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ವೇದಿಕೆ ಸಜ್ಜುಗೊಂಡಿದ್ದು, ಕ್ಯಾಪ್ಟೆನ್ ಭೀಮನ ಜೊತೆ 12 ಆನೆಗಳು ನಾಳೆ ಮೈಸೂರಿನತ್ತ ಹೆಜ್ಜೆ ಹಾಕಲಿವೆ.
ನಾಳೆ ಮೈಸೂರಿಗೆ ಆಗಮಿಸಲಿರುವ ಆನೆಗಳಿಗೆ ಅರಮನೆ ಮೈದಾನದಲ್ಲಿ ಶೆಡ್ ನಿರ್ಮಾಣ ಮಾಡಲಾಗಿದೆ.
ನಾಳಿನ ಗಜಪಯಣ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ, ಹುಣಸೂರು ಶಾಸಕ ಹೆಚ್ ವಿಶ್ವನಾಥ್, ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಯ್ಯ, ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.