ಸೌಥಾಂಪ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.
ಆಂಗ್ಲರ ವಿರುದ್ಧ ಶುಕ್ರವಾರ ಮೊದಲ ಇನ್ನಿಂಗ್ಸ್ನಲ್ಲಿ ಆರು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದರಿಂದಿಗೆ ಈ ಸಾಧನೆ ಮಾಡಿದ 10ನೇ ಭಾರತೀಯ ಬ್ಯಾಟ್ಸ್ಮನ್ ಎನಿಸಿದ್ದಾರೆ. ಇಷ್ಟೆ ಅಲ್ಲ 6 ಸಾವಿರ ರನ್ಗಳನ್ನ ವೇಗವಾಗಿ ಪೂರೈಸಿದ ಎರಡನೇ ಭಾರತೀಯ ಬ್ಯಾಟ್ಸ್ಮನ್ ಎಂಬ ಗೌರವಕ್ಕೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಹಿಂದೆ ಭಾರತದ ಮಾಜಿ ನಾಯಕ ಸುನೀಲ್ ಗಾವಸ್ಕಾರ್ 6 ಸಾವಿರ ರನ್ ಪೂರೈಸಲು 117 ಇನ್ನಿಂಗ್ಸ್ ತೆಗೆದುಕೊಂಡರೆ ಕೊಹ್ಲಿ 119 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ 9ನೇ ಬ್ಯಾಟ್ಸ್ ಮನ್ ಎನಿಸಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತದ 10ನೇ ಬ್ಯಾಟ್ಸ ಮನ್ ಎನಿಸಿದ್ದಾರೆ. ವಿರಾಟ್ ಕೊಹ್ಲಿ 5 ಸಾವಿರ ರನ್ನಿಂದ 6 ಸಾವಿರ ರನ್ ಗುರಿ ತಲುಪಲು 7 ಟೆಸ್ಟ್ ಪಂದ್ಯಗಳನ್ನ ಆಡಿ 8 ತಿಂಗಳು ಸಮಯ ತೆಗೆದುಕೊಂಡಿದ್ದಾರೆ.ಕಳೆದ ವರ್ಷ ಡಿಸೆಂಬರ್ನಲ್ಲಿ ತವರಿನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ 5 ಸಾವಿರ ರನ್ಗಳ ಗಡಿ ದಾಟಿದ್ದರು.