ಬೆಂಗಳೂರು,ಆ.30-ವಿದ್ಯುತ್ ಅವಘಡದಲ್ಲಿ ಶೇ.60ರಷ್ಟು ಸುಟ್ಟುಹೋಗಿದ್ದ ಆರು ವರ್ಷದ ಬಾಲಕನಿಗೆ ರೈಂಬೊ ಮಕ್ಕಳ ತಜ್ಞರು ಉಚಿತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯ ಡಾ.ರಕ್ಷಯ್ ಶೆಟ್ಟಿ , ಮೇ 25ರಂದು 6 ವರ್ಷದ ಅಕಮಾಸ್ ಟಿಗ್ಗ ಬಾಲ್ಕಾನಿಯಲ್ಲಿ ಆಟವಾಡುತ್ತಿದ್ದಾಗ ಮೀಟರ್ ಬಾಕ್ಸ್ ಸಿಡಿದು ಬೆಂಕಿ ಹತ್ತಿಕೊಂಡು ಶೇ.60ರಷ್ಟು ಸುಟ್ಟು ಗಾಯಗೊಂಡಿದ್ದನು.
ತಕ್ಷಣ ಆತನನ್ನು ಮಾರತಹಳ್ಳಿ ರೈನ್‍ಬೋ ಚಿಲ್ಡ್ರನ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ತುರ್ತು ಚಿಕಿತ್ಸೆಯನ್ನು ನೀಡಿ ಸ್ಥಿರಗೊಳಿಸಿದ ನಂತರ ಪಿಎಸ್‍ಐ ತಂಡ ಬಾಲಕನ ಚಿಕಿತ್ಸೆ ಪ್ರಾರಂಭಿಸಲಾಗಿತ್ತು ಎಂದರು.
ಅಕಮಾಸ್‍ಗೆ ಮುಖವೆಲ್ಲ ಸುಟ್ಟಿದ್ದರಿಂದ ವೆಂಟಿಲೇಟರ್‍ನಲ್ಲಿರಸಲಾಗಿತ್ತು. ಏಳು ದಿನಗಳ ಕಾಲ ಆತನಿಗೆ ವೆಂಟಿಲೇಟರ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ನಂತರ ಐಸಿಯುನಲ್ಲಿ ಆಹಾರವನ್ನು ಟ್ಯೂಬ್ ಮೂಲಕ ನೀಡಲಾಗುತ್ತಿತ್ತು.
ಚರ್ಮ ಬದಲಾವಣೆ ಮಾಡುವ ಮುನ್ನ 11 ಬಾರಿ ಡ್ರೆಸ್ಸಿಂಗ್ ಮಾಡಲಾಗಿತ್ತು.ಗಾಯ ಬೇಗನೆ ಗುಣವಾಗಲು ಪೌಷ್ಠಿಕತೆಯ ಬೆಂಬಲ ನೀಡಲಾಯಿತು. ಆಳವಾದ ಗಾಯಗಳಾಗಿರುವ ಜಾಗದಲ್ಲಿ ಚರ್ಮ ಬದಲಾವಣೆ ಮಾಡಲಾಯಿತು. ಅಂತಿಮವಾಗಿ ರೈನ್ ಬೋ ತಂಡ 2.5 ತಿಂಗಳ ಪರಿಶ್ರಮ ಹಾಗೂ ಪ್ರೀತಿಯ ಆರೈಕೆಯಿಂದ ಬಾಲಕ ಗುಣಮುಖವಾಗಿ ಮನೆಗೆ ಹಿಂದಿರುಗಿದ್ದಾನೆ ಎಂದು ವಿವರಿಸಿದರು.
ಡಾ.ಸುಜಾತ ತ್ಯಾಗರಾಜನ್ ಅವರು ಚಿಕಿತ್ಸೆ ನೀಡಿದ್ದು, ಅವರು ಬಾಲಕ ಗುಣಮುಖನಾಗಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಡಾ.ಸುಜಾತ ತ್ಯಾಗರಾಜನ್ ಸೇರಿದಂತೆ ಮತ್ತಿತರರು ಇದ್ದರು.