ಬೆಂಗಳೂರು, ಆ.30- ನಿರ್ಭೀತಿಯಿಂದ ವರದಿ ಮಾಡುವವನೆ ನಿಜವಾದ ಪತ್ರಕರ್ತ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಅಭಿಪ್ರಾಯಪಟ್ಟರು.
ಈ ಸಂಜೆ ಪ್ರಧಾನ ವರದಿಗಾರ ರಾಮಸ್ವಾಮಿ ವಿ.ಕಣ್ವ ಸೇರಿದಂತೆ ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ವಾರ್ಷಿಕ ಮಾಧ್ಯಮ ಪ್ರಶಸ್ತಿ ಹಾಗೂ ಸಾಧಕರಿಗೆ ಪ್ರೆಸ್ಕ್ಲಬ್ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ವರದಿ ಮಾಡುವಾಗ ಯಾವ ಮುಲಾಜಿಗೂ ಒಳಗಾಗಬಾರದು. ನಿರ್ಭೀತಿಯಿಂದ ವರದಿ ಮಾಡುವವರೆ ನಿಜವಾದ ಪತ್ರಕರ್ತರು. ಇಂತಹ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು.
ಜೀವನದ ಎಲ್ಲ ರಂಗಗಳಲ್ಲೂ ಸಂಘಟನೆ ಇರಲೇಬೇಕು. ತಮ್ಮ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಪತ್ರಕರ್ತ ಸಂಘಟನೆ ಮಾಡಿಕೊಂಡಿರುವುದು ಉತ್ತಮ ನಿರ್ಧಾರ ಎಂದರು.
ಪತ್ರಕರ್ತರಿಗೂ ಹಲವಾರು ಸಮಸ್ಯೆಗಳಿರುತ್ತವೆ. ಆ ಸಮಸ್ಯೆಗಳನ್ನು ಅವರು ನೇರವಾಗಿ ಹೇಳಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಸಂಘಟನೆ ಅತ್ಯಗತ್ಯ ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.
ಜರ್ನಲಿಸ್ಟ್ ನೀಡುತ್ತಿರುವ ಈ ಪ್ರಶಸ್ತಿ ಯಾವ ಪ್ರಶಸ್ತಿಗೂ ಕಮ್ಮಿ ಇಲ್ಲ. ಇನ್ನು ಮುಂದೆಯೂ ಉತ್ತಮ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುವಂತೆ ಎಂದು ಸಲಹೆ ನೀಡಿದರು.
ಮೇಯರ್ ಸಂಪತ್ರಾಜು ಮಾತನಾಡಿ, ಬೆಂಗಳೂರು ಅಭಿವೃದ್ಧಿಯಾಗುವುದರಲ್ಲಿ ಪತ್ರಕರ್ತರ ಶ್ರಮ ಸಾಕಷ್ಟಿದೆ. ಅವರ ಆಶೀರ್ವಾದದಿಂದಲೇ ನಾನು ಇಂದು ಮೇಯರ್ ಸ್ಥಾನ ಅಲಂಕರಿಸಿರುವುದು ಎಂದು ಹೇಳಿದರು.
ಏಷ್ಯಾದಲ್ಲೇ ದೊಡ್ಡ ಸ್ಲಂ ಆದ ಡಿ.ಜೆ.ಹಳ್ಳಿಯಲ್ಲಿ ನಾನು ಕಾಪೆರ್Çರೇಟರ್ ಆಗಿದ್ದೆ. ನನ್ನನ್ನು ಗುರುತಿಸಿ ನಮ್ಮ ಪಕ್ಷ ಮೇಯರ್ ಸ್ಥಾನ ನೀಡುವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು ಎಂದರು.
ನಾನು ಪ್ರತಿನಿತ್ಯ ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ಬರುವ ಸಮಸ್ಯೆಗಳನ್ನು ಗಮನಿಸಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ.
ಪತ್ರಕರ್ತರು ಚಳಿ, ಮಳೆ, ಗಾಳಿ ಎನ್ನದೆ ಸಭೆ ಸಮಾರಂಭಗಳಿಗೆ ಬರುತ್ತಾರೆ. ಅವರ ಕಷ್ಟ ಅರಿತು ಈ ಬಾರಿ ಪಾಲಿಕೆ ಬಜೆಟ್ನಲ್ಲಿ ಜರ್ನಲಿಸ್ಟ್ಗಳಿಗಾಗಿ ಒಂದು ಕೋಟಿ ವೈದ್ಯಕೀಯ ಪರಿಹಾರ ನಿಧಿ ಮೀಸಲಿಟ್ಟಿದ್ದೇನೆ ಎಂದು ತಿಳಿಸಿದರು.
ನಗರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಉತ್ತಮ ಪತ್ರಕರ್ತರಿಗೆ ಮುಂದಿನ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿಯವರಲ್ಲಿ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಪ್ರೆಸ್ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವಾಧ್ಯಕ್ಷ ಡಾ.ಬಿ.ವಿ.ನರಸಿಂಹಯ್ಯ, ರಾಜ್ಯಾಧ್ಯಕ್ಷ ಬಿ.ನಾರಾಯಣ, ಹಿರಿಯ ಪತ್ರಕರ್ತರ ವೇದಿಕೆ ಅಧ್ಯಕ್ಷ ಪಾವಗಡ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
ಪ್ರಶಸ್ತಿ ಪುರಸ್ಕøತರು:
ಮಾಧ್ಯಮಪ್ರಶಸ್ತಿ: ಎ.ಹರಿಪ್ರಸಾದ್, ಚಿದಾನಂದಪಟೇಲ್, ಡಿ.ಎಸ್.ಶಿವರುದ್ರಪ್ಪ, ಶಿವಕುಮಾರ ಹೊನ್ನೇನಹಳ್ಳಿ, ಜಿ.ಆರ್.ಮೂರ್ತಿ, ಪ್ರದೀಪ್ ಮಾಲ್ಗುಡಿ, ಆರ್.ಜಿತೇಂದ್ರಕುಮಾರ್, ಎಸ್.ರಾಮರಾವ್, ವಿನೋದ್ಕುಮಾರ್, ಎಸ್.ಚಂದ್ರಶೇಖರ್, ವಿ.ಎಸ್.ಪ್ಯಾಟ್ರಿಕ್ ರಾಜು, ಸಿ.ಸಿ.ಮಯ್ಯ.
ಕೆ.ಪಿ.ನಂಜುಂಡಿ -ನೂತನ ಸುದ್ದಿವಾಹಿನಿ ಪ್ರಶಸ್ತಿ
ಪತ್ರಿಕಾ ಪ್ರಶಸ್ತಿ: ರಾಮಸ್ವಾಮಿ ಕಣ್ವ, ಶಿವಕುಮಾರ್ ಬೆಳ್ಳಿತಟ್ಟೆ, ಗಿರೀಶ್ಗರಗ, ಮಹಮ್ಮದ್ ಬಾಷಾ, ಬಿ.ಎನ್.ಮೋಹನ್ಕುಮಾರ್, ಎಂ.ಎಸ್.ಮಣಿ, ಮಹಮ್ಮದ್ ಸಿದ್ದಿಕ್ ಅಲ್ದೂರಿ, ಶಿವಕುಮಾರ್, ರವಿಕುಮಾರ್, ಕೆ.ಬಸಣ್ಣ, ಬೋರಯ್ಯ.
ನೂತನ ಪತ್ರಿಕೆ ಪ್ರಶಸ್ತಿ-ಟಿ.ಮಂಜುನಾಥ್