ಹಾಕಿ: ವಿಶ್ವ ದಾಖಲೆ ಬರೆದ ಪುರುಷರ ತಂಡ 20 ವರ್ಷ ನಂತರ ಫೈನಲ್ ತಲುಪಿದ ವನಿತೆಯರು

ಜಕಾರ್ತ: ಹಾಲಿ ಚಾಂಪಿಯನ್ ಪುರುಷರ ಭಾರತ ಹಾಕಿ ತಂಡ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದೆ. ಇನ್ನು ಭಾರತ ಮಹಿಳಾ ಹಾಕಿ ತಂಡ ಚೀನಾ ತಂಡವನ್ನ 1-0 ಗೋಲಿನಿಂದ ಸೋಲಿಸಿ ಪ್ರಸಸ್ತಿ ಸುತ್ತಿಗೆ ಲಗ್ಗೆ ಹಾಕಿದೆ.
ಗ್ರೂಪ್ ಹಂತದಲ್ಲಿ ಭಾರತ ಪುರುಷರ ಹಾಕಿ ತಂಡ ಎಷ್ಟು ಗೋಲುಗಳನ್ನ ಬಾರಿಸಿದೆ ಎಂಬುದು ಮುಖ್ಯವಲ್ಲ. ಕಳೆದ ಬಾರಿ ಭಾರತ ಚಾಂಪಿಯನ್ ಆಗಿರೋದ್ರಿಂದ ಸೆಮಿಫೈನಲ್‍ಗೆ ಹೋಗಿರೋದು ದೊಡ್ಡ ವಿಷ ಏನು ಅಲ್ಲ. ಸೆಮಿಫೈನಲ್‍ನಲ್ಲಿ ಭಾರತ ಮಲೇಷ್ಯಾ ತಂಡವನ್ನ ಎದುರಿಸುತ್ತಿದೆ.
ಗ್ರೂಪ್ ವಿಭಾಗದಲ್ಲಿ ಭಾರತ 76 ಗೋಲುಗಳನ್ನ ಬಾರಿಸಿದೆ. ಇದರೊಂದಿಗೆ ಬಲಿಷ್ಠ ತಂಡ ಎನಿಸಿರುವ ಅರ್ಜೆಂಟಿನಾ ತಂಡ ಪಾನ್ ಅಮೆರಿಕಾ ಗೇಮ್ಸ್ ನಲ್ಲಿ 68 ಗೋಲು ಬಾರಿಸಿತ್ತು. ಈ ದಾಖಲೆಯನ್ನ ಭಾರತ ಅಳಿಸಿ ಹಾಕಿದೆ.
20 ವರ್ಷಗಳ ನಂತರ ಭಾರತ ಮಹಿಳಾ ಹಾಕಿ ತಂಡ ಏಷ್ಯನ್ ಗೇಮ್ಸ್‍ನಲ್ಲಿ ಫೈನಲ್ ತಲುಪಿ ಹೊಸ ದಾಖಲೆ ಬರೆದಿದೆ. ಸೆಮಿಫೈನಲ್‍ನಲ್ಲಿ ಚೀನಾ ತಂಡವನ್ನ 1-0 ಗೋಲಿನಿಂದ ಸೋಲಿಸಿತು.
52ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ಬಾರಿಸಿ ತಂಡದ ಗೆಲುವಿನ ರೂವಾರಿಯಾದ್ರು. 1982ರಲ್ಲಿ ಬ್ಯಾಕಾಂಕ್‍ನಲ್ಲಿ ನಡೆದ ಏಷ್ಯನ್ ಗೇಮ್ಸನಲ್ಲಿ ಭಾರತ ಮಹಿಳಾ ತಂಡ ಕೊನೆಯ ಬಾರಿಗೆ ಫೈನಲ್ ತಲುಪಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ