ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಏಕ್ಸಪರ್ಟ್ ಕಿಡ್ಸ್ ಅಕಾಡೆಮಿಯ ವಿದ್ಯಾರ್ಥಿಯಾದ ಸಾನ್ವಿ ಅಂಗಡಿ ಇತ್ತೀಚೆಗೆ ಥೈಲ್ಯಾಂಡ್ ದೇಶದ ಕೋರಾಟನಲ್ಲಿ ನಡೆದ ಅಂತರಾಷ್ಟ್ರೀಯ ಗಣಿತ ಮತ್ತು ಸಂಖ್ಯಾಶಾಸ್ತ್ರದ ಸ್ಪರ್ಧೆಯಲ್ಲಿ ಎರಡನೇ ಸ್ಥಾನಪಡೆದು ವಿಜೇತರಾಗಿ ದೇಶಕ್ಕೆ ಗೌರವ ತಂದಿದ್ದಾಳೆ ಎಂದು ಕೆಎಲ್ಇ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ವಿರೇಶ ಅಂಗಡಿ ತಿಳಿಸಿದರು.
ನಗರದಲ್ಲಿಂದು ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗಷ್ಟ 15ರಂದು ಥೈಲ್ಯಾಂಡಿನ ಕೋರಟನಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ದೇಶಗಳಾದ ಕಾಂಬೂಡಿಯಾ, ಚೀನಾ, ಹಾಂಗಕಾಂಗ್, ಭಾರತ, ಕೋರಿಯಾ, ಮಲೇಷಿಯಾ, ಸಿಂಗಾಪೂರ, ಥೈವಾನ ಮತ್ತು ಥೈಲ್ಯಾಂಡ್ ಸೇರಿದಂತೆ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಆ ಸ್ಪರ್ಧೆಯಲ್ಲಿ ಪರಿವರ್ತನ ಗುರುಕುಲ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಸಾಧನೆ ಗರಿ ಮುಡಿಗೇರಿಸಿಕೊಂಡಿದ್ದಾರೆ ಎಂದರು.
ಮಕ್ಕಳಲ್ಲಿರುವ ಗಣಿತ ಮತ್ತು ಸಂಖ್ಯಾಶಾಸ್ತ್ರದ ಪ್ರತಿಭೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮುಂಬೈನ Edusmartinc.pvt.ltd. ರಾಷ್ಟ್ರೀಯ ಮಟ್ಟದಲ್ಲಿ ಕ್ರಿಯಾಶೀಲವಾಗಿದೆ ಅಲ್ಲದೆ ಸಂಸ್ಥೆಯ ಪ್ರಾನ್ಸಿಸ್ ಅಕ್ಷತಾ ಶಣೈ ಅವರು ಸಾನ್ವಿಗೆ ತರಬೇತಿ ನೀಡಿ ಅವಳ ಸಾಧನೆಗೆ ಬೆನ್ನೆಲುಬಾಗಿದ್ದಾರೆ ಎಂದರು.
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಹಾಗೂ ಮುಂಬೈನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಅರ್ಹಳಾಗಿದ್ದಾಳೆ ಅಬ್ಯಾಕಸ್ ಮಕ್ಕಳಲ್ಲಿರುವ ಗಣಿತದ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಪೂರಕವಾಗಿದೆ ಏಕಾಗ್ರತೆ ಹಾಗೂ ಕಾರ್ಯಕ್ಷಮತೆಗೆ ಉತ್ತಮವಾದ ಮಾರ್ಗವಾಗಿದೆ ಎಂದರು.
ಬಳಿಕ ಮಾತನಾಡಿದ ಅಕ್ಷತಾ ಶಣೈ, ಎಜುಸ್ಮಾರ್ಟ್ ಅಬಾಕಸ್ ತರಬೇತಿಯಲ್ಲಿ ಸುಮಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ ಆದರೇ ಸಾನ್ವಿ ಅವಳ ಕಾರ್ಯಪ್ರವೃತ್ತತೆ ಹಾಗೂ ಅವಳ ಹಂಬಲ ಹಾಗೂ ಉತ್ಸಾಹವೇ ಅವಳ ಸಾಧನೆಗೆ ಕಾರಣವಾಗಿದೆ ಅಲ್ಲದೇ ಮನೆಯೇ ಮೊದಲ ಪಾಠಶಾಲೆ ಎಂಬಂತೆ ಅಂಗಡಿ ದಂಪತಿಗಳು ಸಾನ್ವಿಯ ಸಾಧನೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದರು ಅಲ್ಲದೇ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ಅಂತರಾಷ್ಟ್ರೀಯ ಮಟ್ಟದಲ್ಲಿ ದ್ವೀತಿಯ ಬಹುಮಾನಕ್ಕೆ ಬಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಹುಮಾನ ವಿಜೇತೆ ಸಾನ್ವಿ ಅಂಗಡಿ ಮಾತನಾಡಿ ಬಹುಮಾನ ಬಂದಿರುವುದು ನನಗೆ ಖುಷಿ ತಂದಿದೆ ಮೊದಲಿಗೆ ನನ್ನಲ್ಲಿ ಭಯ ಮೂಡಿತು ಆದರೆ ಸ್ಪರ್ಧೆಯಲ್ಲಿ ಭಾಗವಹಿಸುವಾಗ ನನ್ನಲ್ಲಿ ಆ ಭಯ ಮಾಯವಾಯಿತು ನನಗೆ ತರಬೇತಿ ನೀಡಿದ ಅಕ್ಷತಾ ಶಣೈ ಹಾಗೂ ನಮ್ಮ ಪಾಲಕರಿಗೆ ನಾನು ಋಣಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಡಾ.ತೇಜಸ್ವೀನಿ ಅಂಗಡಿ ಸೇರಿದಂತೆ ಇತರರು ಇದ್ದರು.