ಬೋಧ್ ಗಯಾ: 15 ವಿದ್ಯಾರ್ಥಿಗಳ ಮೇಲೆ ಲೈಂಗಿಕ ವಿಕೃತಿ ಮೆರೆದ ಆರೋಪದಲ್ಲಿ ಬೌದ್ಧ ಭಿಕ್ಷುವೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಮಸ್ಟಿಪುರ್ ಎಂಬಲ್ಲಿರುವ ಪ್ರಸನ್ನ ಜ್ಯೋತಿ ಬೌದ್ಧ ಧ್ಯಾನ ಮಂದಿರದಲ್ಲಿ ಘಟನೆ ನಡೆದಿದ್ದು, ದೌರ್ಜನ್ಯಕ್ಕೊಳಗಾದ ಬಾಲಕರು, ಅಸ್ಸಾಂ ನ ಕರ್ಬಿ ಅಂಗ್ಲಾಂಗ್ ಜಿಲ್ಲೆಯವರಾಗಿದ್ದು ಅವರೆಲ್ಲಾ ಈ ವಿದ್ಯಾಕೇದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಪ್ರಕರಣ ಸಂಬಂಧ ಬೋಧ್ ಗಯಾದಲ್ಲಿ ಧ್ಯಾನ ಕೇಂದ್ರ ಮತ್ತು ಶಾಲೆಯನ್ನು ನಡೆಸುತ್ತಿದ್ದ ಆರೋಪಿಯನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮುಜಾಫರ್ಪುರ್ನಲ್ಲಿ ಸಂತ್ರಸ್ತರ ಕೇಂದ್ರದಲ್ಲಿ 40 ಕ್ಕೂ ಹೆಚ್ಚು ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಈ ಘಟನೆ ವರದಿಯಾಗಿದ್ದು ವಿಪಕ್ಷಗಳು ಬಿಹಾರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.