ವಿಕಲಚೇತನರಿಗೆ ಸಾಮಾನ್ಯರಂತೆ ಸಾಧ£ಗೆ ಅವಕಾಶ: ಕುಲಪತಿ ಪೆÇ್ರ.ವೇಣುಗೋಪಾಲ್

Varta Mitra News

ಬೆಂಗಳೂರು, ಆ.29- ವಿಕಲಚೇತನರು ಸಾಮಾನ್ಯ ಜನರಂತೆ ಸಾಧನೆ ಮಾಡಲು ವಿಶ್ವವಿದ್ಯಾಲಯವು ಎಲ್ಲ ರೀತಿಯ ಸಹಾಯ ಮಾಡುತ್ತಿದೆ ಎಂದು ಕುಲಪತಿ ಪೆÇ್ರ.ವೇಣುಗೋಪಾಲ್ ತಿಳಿಸಿದರು.
ಜ್ಞಾನಭಾರತಿ ಆವರಣದ ಸೆನೆಟ್ ಸಭಾಂಗಣದಲ್ಲಿ ವಿಕಲಚೇತನರ ಸಬಲೀಕರಣ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಲಚೇತನರ ಶೈಕ್ಷಣಿಕ ಬೆಳವಣಿಗೆಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಡಿಪ್ಲಮೋ ಕೋರ್ಸ್ ಮತ್ತು ಪುನರ್ವಸತಿ ಹಾಗೂ ಸಂಶೋಧನಾ ಕೇಂದ್ರ ಪ್ರಾರಂಭಿಸಲಾಗುವುದು ಎಂದರು.

ವಿಕಲಚೇತನ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ತ್ರಿಚಕ್ರ ವಾಹನ ನೀಡಲು ಆದೇಶಿಸಿದ ಅವರು, ವಿಕಲಚೇತನರು ತಮ್ಮ ಸಮಸ್ಯೆ ಏನೇ ಇದ್ದರೂ ಯಾವುದೇ ಸಮಯದಲ್ಲಾಗಲಿ ನನ್ನನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ಅಭಯ ನೀಡಿದರು.
ಸಾಮಾನ್ಯ ಜನರಿಗೆ ಸಾಕಷ್ಟು ಸೌಲಭ್ಯಗಳಿದ್ದರೂ ಸಹ ಕೆಲಸ ಮಾಡುವ ಮನಸ್ಥಿತಿ ಕಡಿಮೆ ಇರುತ್ತದೆ. ಆದರೆ, ವಿಕಲಚೇತನರಿಗೆ ದೇವರು ವಿಶೇಷವಾದ ಜ್ಞಾನ ಕೊಟ್ಟಿರುವುದರಿಂದ ಎಲ್ಲರಿಗಿಂತ ಹೆಚ್ಚು ಕೆಲಸ ಮಾಡಬಲ್ಲಿರಿ ಹಾಗೂ ಸಾಧನೆ ಮಾಡುತ್ತೀರ ಎಂದು ಅವರು ಹೇಳಿದರು.

ವಿಕಲಚೇತನರ ಸಬಲೀಕರಣ ಇಲಾಖೆ ನಿರ್ದೇಶಕ ಡಾ.ಸಿದ್ದರಾಜು ಮಾತನಾಡಿ, ರಾಜ್ಯಸರ್ಕಾರ ವಿಕಲಚೇತನರಿಗೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದೆ. ಅದರಲ್ಲೂ ದೃಷ್ಟಿಮಾಂದ್ಯ ವಿದ್ಯಾರ್ಥಿಗಳಿಗೆ ಉಚಿತ ಟಾಕಿಂಗ್ ಲ್ಯಾಪ್‍ಟಾಪ್, ವಿದ್ಯಾರ್ಥಿ ವೇತನ, ತ್ರಿಚಕ್ರ ವಾಹನ, ಸಾಧನ-ಸಲಕರಣೆಗಳನ್ನು ನೀಡಲಾಗುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪೆÇ್ರ.ಬಿ.ಕೆ.ರವಿ, ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ.ಸುದೇಶ್, ವಿಕಲಚೇತನರ ಘಟಕದ ವಿಶೇಷಾಧಿಕಾರಿ ಡಾ.ಸುರೇಂದ್ರಕುಮಾರ್, ಬ್ರೈಲ್ ಸಂಶೋಧನಾ ಕೇಂದ್ರದ ಇಸ್ಮತ್ ಅಫ್ಸಾಲ್, ಮಾಜಿ ವಿಶೇಷಾಧಿಕಾರಿ ಡಾ.ರಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ