
ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಹನ್ನೊಂದನೇ ದಿನ ಟ್ರಿಪಲ್ ಜಂಪ್ನಲ್ಲಿ ಭಾರತದ ಅರ್ಪಿಂದರ್ ಸಿಂಗ್ ಮತ್ತು ಹೆಪ್ಟಾಥ್ಲಾನ್ನಲ್ಲಿ ಸ್ವಪ್ನಾ ಬರ್ಮನ್ ಚಿನ್ನದ ಪದಕ ಗೆದ್ದಿದ್ದಾರೆ.
ಇದು ಭಾರತದ ಪಾಲಿಗೆ ಈ ಕ್ರೀಡಾಕುಟದಲ್ಲಿ ದೊರಕಿದ ಹನ್ನೊಂದನೇ ಚಿನ್ನದ ಪದಕವಾಗಿದೆ. ಅಥ್ಲೀಟ್ ಅರ್ಪಿಂದರ್ ಸಿಂಗ್ 16.77 ಮೀಟರ್ ದೂರ ಜಿಗಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಏಷ್ಯನ್ ಗೇಮ್ಸ್ ನಲ್ಲಿ ತ್ರಿವಿಧ ಜಿಗಿತ (ಟ್ರಿಪ್ಪಲ್ ಜಂಪಿಂಗ್) ನಲ್ಲಿ ಸ್ವರ್ಣ ಗಳಿಸಿದ ಅಪರೂಪದ ಸಾಧಕರಾಗಿ ಅರ್ಪಿಂದರ್ ಮಿಂಚಿಒದ್ದಾರೆ.
ಇದರೊಡನೆ ಬರೋಬ್ಬರಿ 48 ವರ್ಷಗಳ ಬಳಿಕ ಟ್ರಿಪಲ್ ಜಂಪ್ನಲ್ಲಿ ಭಾರತಕ್ಕೆಸ್ವರ್ಣದ ಪದಕ ಲಭಿಸಿದಂತಾಗಿದೆ. ಇದಕ್ಕೆ ಮುನ್ನ 1970ನೇ ವರ್ಷದ ಏಷ್ಯನ್ ಗೇಮ್ಸ್ ನಲ್ಲಿ ಮೊಹಿಂದರ್ ಸಿಂಗ್ ಗಿಲ್ ಈ ಸಾಧನೆ ಮಾಡಿದ್ದರು.
ಸ್ವಪ್ನಾ ಬರ್ಮನ್ ಗೆ ಸ್ವರ್ಣ
ಏಷ್ಯನ್ ಗೇಮ್ಸ್ ಹೆಪ್ಟಾಥ್ಲಾನ್ ವಿಭಾಗದಲ್ಲಿ ಸ್ವಪ್ನಾ ಬರ್ಮನ್ ದಾಖಲೆಯ ಚಿನ್ನದ ಪದಕ ಗಳಿಸಿದ್ದಾರೆ.
ಇದು ಭಾರತ ಪಾಲಿಗೆ ಹೆಪ್ಟಾಥ್ಲಾನ್ ವಿಭಾಗದಲ್ಲಿ ದೊರೆಯುತ್ತಿರುವ ಪ್ರಥಮ ಚಿನ್ನದ ಪದಕವಾಗಿದೆ.
ಇದೇ ವಿಬಾಗದಲ್ಲಿ ಭಾರತದ ಇನೋರ್ವ ತಾರೆ ಪೂರ್ಣಿಮಾ ಹೆಂಬರಾಮ್ ನಾಲ್ಕನೇ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಕಳೆದ ಕೆಲ ದಿನಗಳಿಂದ ದವಡೆ ನೋವೊನಿಂದ ಬಳಲುತ್ತಿದ್ದ ಸ್ವಪ್ನಾ ನೊವನ್ನು ಮರೆತು ಆತ್ಮವಿಶ್ವಾಸದಿಂದ ಕಣಕ್ಕಿಳಿದು ಈ ಐತಿಹಾಸಿಕ ಸಾಧನೆ ಮೆರೆದಿದ್ದಾರೆ.
ಸ್ವಪ್ನ ಸ್ವರ್ಣ ಪದಕದೊಡನೆ ಭಾರತದ ಒತ್ಟೂ ಪದಕಗಳ ಸಂಖ್ಯೆ 54ಕ್ಕೆ ಏರಿದ್ದು ಇದರಲ್ಲಿ 11 ಚಿನ್ನ, 20 ಬೆಳ್ಳಿ, 23 ಕಂಚಿನ ಪದಕ ಸೇರಿದೆ.