ಬೆಂಗಳೂರು, ಆ.29- ಹಲಸೂರಿನಲ್ಲಿ 2008ರಿಂದ ಕಾರ್ಯಾಚರಿಸುತ್ತಿದ್ದ ರೇಪ್ಕೋ ಬ್ಯಾಂಕ್ನ ಕಚೇರಿಯನ್ನು ನಂ.46, ಸಿಎಚ್ಎಂ ರಸ್ತೆ, ಇಂದಿರಾನಗರದ ವಿಳಾಸಕ್ಕೆ ಸ್ಥಳಾಂತರಿಸಲಾಗಿದ್ದು, ನೂತನ ಕಚೇರಿಯನ್ನು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. ಇಸಬೆಲ್ಲಾ ಉದ್ಘಾಟಿಸಿದರು.
ಗ್ರಾಹಕರಿಗೆ ಇನ್ನಷ್ಟು ಅತ್ಯುತ್ತಮ ಸೇವೆ ನೀಡುವ ಉದ್ದೇಶದಿಂದ ಸುಸಜ್ಜಿತ ಹಾಗೂ ಹವಾನಿಯಂತ್ರಿತ ಕಟ್ಟಡಕ್ಕೆ ಬ್ಯಾಂಕನ್ನು ಸ್ಥಳಾಂತರಿಸಲಾಗಿದೆ. ಬ್ಯಾಂಕ್ ಈಗಾಗಲೇ 3500 ಗ್ರಾಹಕರನ್ನು ಹೊಂದಿದ್ದು, ಸುಮಾರು 80 ಕೋಟಿ ರೂ.ವ್ಯವಹಾರ ನಡೆಸಿದೆ.
2018-19ನೇ ಹಣಕಾಸು ವರ್ಷದಲ್ಲಿ 15,500 ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊಂದಲಾಗಿದೆ.
ರಿಪಾಟ್ರಿಯೇಟ್ಸ್ ಕಾಪೆರ್Çೀರೇಟ್ ಫೈನಾನ್ಸ್ ಆಂಡ್ ಡೆವಲಪ್ಮೆಂಟ್ ಬ್ಯಾಂಕ್- ರೇಪ್ಕೋ ಬ್ಯಾಂಕ್ 1969 ನವೆಂಬರ್ 19ರಂದು ಸ್ಥಾಪನೆಯಾಯಿತು. ಬರ್ಮಾ ಮತ್ತು ಶ್ರೀಲಂಕಾದಿಂದ ವಾಪಾಸಾದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದು ಇದರ ಪ್ರಮುಖ ಧ್ಯೇಯವಾಗಿದೆ. ಬ್ಯಾಂಕ್ ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಈ ಬ್ಯಾಂಕ್ನ ಪಾಲುದಾರ ರಾಜ್ಯಗಳಾಗಿವೆ.
ಬ್ಯಾಂಕ್ನ ನಿರ್ದೇಶಕರ ಮಂಡಳಿಯನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ. ದಕ್ಷಿಣದ ನಾಲ್ಕು ರಾಜ್ಯಗಳ ಹಿರಿಯ ಐಎಎಸ್ ಅಧಿಕಾರಿಗಳು ನಿರಾಶ್ರಿತರ ಪ್ರತಿನಿಧಿಗಳಾಗಿ ಈ ಬ್ಯಾಂಕ್ನ ಮಂಡಳಿಯಲ್ಲಿ ಇರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.