ಪಾತ್ ಬ್ರೇಕಿಂಗ್ ಪ್ರೈಸಿಂಗ್ ಎಂಜಿನ್ ಆರಂಭಿಸಿದ ಆಟೊಮೊಬೈಲ್ ಸಂಸ್ಥೆಗಳು

Varta Mitra News

ಬೆಂಗಳೂರು, ಆ.29- ವಾಹನಗಳ ಮಾರುಕಟ್ಟೆ ಬೆಲೆಯನ್ನು ಸುಲಭವಾಗಿ ತಿಳಿಯಲು ಆನ್ ಲೈನ್ ಆಟೊಮೊಬೈಲ್ ವಹಿವಾಟು ನಡೆಸುವಂತಹ ಭಾರತದ ಪ್ರಮುಖ ಸಂಸ್ಥೆಯಾದ ಡ್ರೂಮ್, ಆರೆಂಜ್ ಬುಕ್ ವಾಲ್ಯೂ (ಒಬಿವಿ) ಎಂಬ ವಿಶೇಷವಾದ ಪಾತ್ ಬ್ರೇಕಿಂಗ್ ಪ್ರೈಸಿಂಗ್ ಎಂಜಿನ್ ಆರಂಭಿಸಿದೆ.
ಈ ಎಂಜಿನ್ ಮೂಲಕ ಬಳಕೆಯಾಗಿರುವ ವಾಹನಗಳ ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ತಿಳಿದುಕೊಳ್ಳಬಹುದು. ಹೀಗಾಗಿಯೇ ಎಂಜಿನ್ ಆರಂಭವಾದ ಕೇವಲ 28 ತಿಂಗಳಲ್ಲಿ 200 ಮಿಲಿಯನ್ ಬಳಕೆದಾರರನ್ನು ಪಡೆದಿದೆ. ಇವರಲ್ಲಿ ಮೊದಲ 20 ತಿಂಗಳಲ್ಲೇ 100 ಮಿಲಿಯನ್ ಬಳಕೆದಾರರು ಸೇರ್ಪಡೆಯಾಗಿದ್ದಾರೆ.

ತರ ಕಳೆದ 8 ತಿಂಗಳಲ್ಲೇ 100 ಮಿಲಿಯನ್ ಬಳಕೆದಾರರು ಮುಂದೆ ಬಂದಿದ್ದಾರೆ. ಬಳಕೆದಾರರಿಂದ ಇಂತಹ ಅಭೂತಪೂರ್ವ ಪ್ರತಿಕ್ರಿಯೆ ದೊರೆತ ನಂತರ, ನಿರ್ದಿಷ್ಟ ಮತ್ತು ವಾಸ್ತವ ಬೆಲೆ ತೋರಿಸುವಲ್ಲಿ ಪ್ರಮುಖ ಸ್ಥಾನ ಸಂಪಾದಿಸಿದೆ. ಇದಷ್ಟೇ ಅಲ್ಲದೇ, ಭಾರತದ ಮೂರತನೇ ಅತೀ ದೊಡ್ಡ ಸರ್ಚ್ ಎಂಜಿನ್ ಖ್ಯಾತಿಗೂ ಪಾತ್ರವಾಗಿದೆ.
ಈಗಾಗಲೇ ಬಳಕೆ ಮಾಡಿರುವ ವಾಹನಗಳ ಮೌಲ್ಯ, ಬೆಲೆ ನಿರ್ಧರಿಸುವುದು ತುಂಬಾ ಕಷ್ಟದ ಕೆಲಸ. ಆ ವಾಹನಗಳ ಮೌಲ್ಯ ವೈಯಕ್ತಿಕ ಮಾನದಂಡಗಳಿಗೆ ಸಂಬಂಧಿಸಿದ್ದು, ಯಾವುದೇ ಅಂಕಿ ಅಂಶಗಳು ದೊರೆಯುವುದು ಕಷ್ಟವಾಗಿರುತ್ತದೆ. ಈ ವಿಶೇಷ ಆನ್ ಲೈನ್ ತಾಣ ಬಳಕೆಗೆ ಬಂದ ನಂತರ, ಬಳಕೆದಾರರು ಬೆಲೆ ನಿರ್ಧರಿಸುವುದಕ್ಕೆ ಒಂದು ವೇದಿಕೆ ಸಿಕ್ಕಂತಾಗಿದೆ. ಮತ್ತು ಬೆಲೆ ವಿಷಯದಲ್ಲಿ ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂದೀಪ್ ಅಗರ್ ವಾಲ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ