ಬೆಂಗಳೂರು, ಆ.29- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿ ಭಯದ ವಾತಾವರಣ ನಿರ್ಮಿಸಿದ್ದ ಪ್ರಕರಣದ ತನಿಖೆ ನಡೆಸಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೆÇಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಣಿಪಾಲ್ ಮೂಲದ ಆದಿತ್ಯರಾವ್ (34) ಬಂಧಿತ ಆರೋಪಿ.
ಬೆಂಗಳೂರಿನಲ್ಲಿ ವಾಸವಾಗಿದ್ದ ಆದಿತ್ಯರಾವ್ ಹೊಟೇಲ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದನು.
ಬಿಇ, ಎಂಬಿಎ ವ್ಯಾಸಂಗ ಮಾಡಿದ್ದ ಆದಿತ್ಯರಾವ್ ಈ ಹಿಂದೆ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಕೇಳಿಕೊಂಡು ಏಜೆನ್ಸಿ ಮೂಲಕ ತೆರಳಿದ್ದನು.
ಆ ಸಂದರ್ಭದಲ್ಲಿ ಕೆಲಸ ದೊರೆಯದ ಕಾರಣ ನಿರಾಸೆಗೊಂಡು ಹಿಂದಿರುಗಿದ್ದನು. ಇಷ್ಟಕ್ಕೇ ಸುಮ್ಮನಾಗದ ಆದಿತ್ಯ, ಆ.20ರಂದು ವಿಮಾನ ನಿಲ್ದಾಣದ ಎನ್ಕ್ವಯರಿ ನಂಬರ್ಗೆ ಕರೆ ಮಾಡಿ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಬಾಂಬ್ ಇದ್ದು, ಅದು ಸ್ಫೋಟಗೊಳ್ಳಲಿದೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದನು. ಈ ಬಗ್ಗೆ ಟರ್ಮಿನಲ್ ಮ್ಯಾನೇಜರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೆÇಲೀಸರಿಗೆ ದೂರು ನೀಡಿದ್ದರು.
ಮತ್ತೆ ಆ.27ರಂದು ಆರೋಪಿ ಏರ್ ಏಷ್ಯಾ ಕೌಂಟರ್ ನಂಬರ್ಗೆ ಕರೆ ಮಾಡಿ ಕೊಚ್ಚಿ ಹಾಗೂ ಹೈದರಾಬಾದ್ಗೆ ಪ್ರಯಾಣಿಸುವ ವಿಮಾನದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಹಾಗೂ ಟರ್ಮಿನಲ್ ಮ್ಯಾನೇಜರ್ ಡ್ಯೂಟಿ ಮೊಬೈಲ್ ನಂಬರ್ಗೆ ಕರೆ ಮಾಡಿ ಮುಂಬೈ, ಕೊಯಮತ್ತೂರು ಹಾಗೂ ದೆಹಲಿಗೆ ಪ್ರಯಾಣ ಮಾಡುವ ವಿಮಾನಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಕರೆ ಮಾಡಿದ್ದನು.
ಟರ್ಮಿನಲ್ ಮ್ಯಾನೇಜರ್ ಅವರು ಈ ಬಗ್ಗೆ ದೂರು ನೀಡಿದ್ದರು. ಆ ಸಂದರ್ಭದಲ್ಲಿ ಎಲ್ಲಾ ಕಡೆ ಬಾಂಬ್ ನಿಷ್ಕ್ರಿಯದಳದವರು ಶೋಧ ನಡೆಸಿದಾಗ ಅದು ಹುಸಿ ಕರೆ ಎಂಬುದು ಗೊತ್ತಾಗಿತ್ತು.
ಎರಡು ಬಾರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಕರೆ ಮಾಡಿ ಬಾಂಬ್ ಇರುವುದಾಗಿ ಬೆದರಿಕೆ ಉಂಟುಮಾಡಿದ್ದರಿಂದ ಪೆÇಲೀಸರು ಎಲ್ಲ ಕಡೆ ಅಲರ್ಟ್ ಮಾಡಿ ಶೋಧ ನಡೆಸಿದ್ದು, ಇದು ಹುಸಿ ಕರೆ ಎಂದು ತಿಳಿದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ತನಿಖೆ ಕೈಗೊಂಡು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೆÇಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಎರಡು ಪ್ರಕರಣ, ಜಯನಗರ, ಸುದ್ದಗುಂಟೆ ಪಾಳ್ಯ, ಬೆಂಗಳೂರು ರೈಲ್ವೆ ನಿಲ್ದಾಣ ಪೆÇಲೀಸ್ ಠಾಣೆ ಸೇರಿದಂತೆ ಒಟ್ಟು ಐದು ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.