
ರ್ಯಾಂಬೋ 2 ಚಿತ್ರದ ಯಶಸ್ಸಿನ ನಂತರ ಶರಣ್ ಇದೀಗ ವಿಕ್ಟರಿ 2 ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರದಲ್ಲಿ ಶರಣ್ ಮತ್ತು ರವಿಶಂಕರ್ ಮಹಿಳೆಯ ವೇಷ ಧರಿಸಿರುವುದು ಕುತೂಹಲ ಹೆಚ್ಚಿಸಿದೆ.
2013ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ವಿಕ್ಟರ್ ಚಿತ್ರದ ಸೀಕ್ವೆಲ್ ಇದಾಗಿದೆ. ಚಿತ್ರವನ್ನು ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರವಿಶಂಕರ್ ಮತ್ತು ಶರಣ್ ಮಹಿಳೆಯ ವೇಷ ಧರಿಸಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಶರಣ್ ಅದಾಗಲೇ ಜೈ ಲಲಿತಾ ಚಿತ್ರದಲ್ಲಿ ಮಹಿಳೆ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ ಮತ್ತೊಮ್ಮೆ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರವಿಶಂಕರ್ ಅವರಿಗೆ ಇದು ಮೊದಲ ಪ್ರಯತ್ನವಾಗಿದೆ ಎಂದು ಹರಿ ಸಂತೋಷ್ ಹೇಳಿದ್ದಾರೆ.
ಚಿತ್ರದಲ್ಲಿನ ಮಹಿಳೆ ಪಾತ್ರಕ್ಕಾಗಿ ನಾನು 5 ತಿಂಗಳುಗಳ ಕಾಲ ಡಯೆಟ್ ಮಾಡಿದೆ. ಅದಕ್ಕಾಗಿ ಅನ್ನ, ಡೈರಿ ಪದಾರ್ಥಗಳನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟಿದೆ. ಇದರಿಂದ ನಾನು ಐದು ಕೆಜಿ ತೂಕ ಇಳಿಕೊಂಡಿದ್ದೇನೆ ಎಂದು ಶರಣ್ ಹೇಳಿದ್ದಾರೆ.