
ಬೆಂಗಳೂರು, ಆ.28- ಮೆಜಿಸ್ಟಿಕ್‍ನಿಂದ ಪ್ರೀಡಂ ಪಾರ್ಕ್‍ವರೆಗೆ ಟ್ರಾಫಿಕ್‍ಜಾಮ್ ಆಗಿ ವಾಹನ ಸವಾರರು, ಸಾರ್ವಜನಿಕರು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಪರದಾಡಬೇಕಾಯಿತು.
ಸಿಐಟಿಯು ನೇತೃತ್ವದಲ್ಲಿಂದು ಪಂಚಾಯತ್ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.
ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಗ್ರಾಪಂ, ತಾಪಂ, ಜಿಪಂ ನೌಕರರು ರೈಲಿನಿಂದ ಆಗಮಿಸಿ ಬೆಳಗ್ಗೆ 11 ಗಂಟೆ ಮೆಜೆಸ್ಟಿಕ್‍ನಿಂದ ಪ್ರೀಡಂ ಪಾರ್ಕ್‍ವರೆಗೆ ಮೆರವಣಿಗೆಯಲ್ಲಿ ಹೊರಟರು.
ಅಸಂಖ್ಯಾತ ಜನ ಸೇರಿದ್ದರಿಂದ ಪ್ರಮುಖ ರಸ್ತೆಗಳಲ್ಲೇ ವಾಹನಗಳು ನಿಲ್ಲಬೇಕಾಯಿತು. ಮೆಜೆಸ್ಟಿಕ್ ಸುತ್ತಮುತ್ತ, ಶಿವಾಜಿನಗರದ ಕಡೆಗೆ, ಕೆ.ಆರ್.ಮಾರುಕಟ್ಟೆ, ಆನಂದರಾವ್ ವೃತ್ತದ ಕಡೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ವಾಹನಗಳ ಸಾಗರವೇ ಕಂಡು ಬಂದಿತು.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು, ಆಟೋಗಳು, ದ್ವಿಚಕ್ರ ವಾಹನಗಳು, ಕ್ಯಾಬ್‍ಗಳು ಸೇರಿದಂತೆ ಸರ್ಕಾರಿ ಖಾಸಗಿ ವಾಹನಗಳು ಒಂದಿಂಚೂ ಮುಂದೆ ಚಲಿಸಲಾಗದೆ ತೀವ್ರ ತೊಂದರೆ ಅನುಭವಿಸಬೇಕಾಯಿತು. ಶಾಲಾ-ಕಾಲೇಜು, ಕಚೇರಿಗಳಿಗೆ ಹೋಗುವವರು ಟ್ರಾಫಿಕ್ ಜಾಮ್‍ನಿಂದ ತೀವ್ರ ಅಡಚಣೆಯಾಯಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೆÇಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.