ಬೆಂಗಳೂರು, ಆ.28-ಕರ್ನಾಟಕ ಶುದ್ಧೀಕರಣ ವೇದಿಕೆ ವತಿಯಿಂದ ಕರ್ನಾಟಕದ 52 ಗಡಿ ಪ್ರದೇಶಗಳಲ್ಲಿ ಕನ್ನಡಾಂಬೆಯ ಜಾಗೃತಿ ಜ್ಯೋತಿ ಯಾತ್ರೆ ಸೆ.14 ರಿಂದ 30ರವರೆಗೆ ನಡೆಯಲಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಎಚ್.ಕೃಷ್ಣಪ್ಪ ಗುಣಸಾಗರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಿಂದಲೂ ಯಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದು, ಅದೇ ರೀತಿ ಈ ವರ್ಷವೂ ಸಹ ಕನ್ನಡಿಗರ ಸ್ವಾಭಿಮಾನದ ಜಾಗೃತಿ ಜ್ಯೋತಿಯಾತ್ರೆಯನ್ನು ವಿನೂತನ ರೀತಿಯಲ್ಲಿ ಕಲಾತಂಡದೊಂದಿಗೆ ವಿಶೇಷ ಉಪನ್ಯಾಸ ನೀಡವ ಮೂಲಕ ಜಾಗೃತಿ ಯಾತ್ರೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಗಡಿಭಾಗದಲ್ಲಿ ಕನ್ನಡಿಗರು ಭಯದ ವಾತಾವರಣದಲ್ಲಿ ಇರುವುದನ್ನು ಮನಗಂಡು ಪ್ರತಿ ವರ್ಷವೂ ಇಂತಹ ವಿನೂತನ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಅಲ್ಲಿನ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಹಾಗೂ ಮುಂತಾದ ಎಲ್ಲಾ ವಿಷಯಗಳಲ್ಲಿ ಅಧ್ಯಯನ ನೆಸಿ ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಸೆ.14 ರಂದು ಟೌನ್ಹಾಲ್ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು.