ದಿಬ್ರೂಗಢ: ಭಗವದ್ಗೀತೆಯ 700 ಶ್ಲೋಕಗಳನ್ನು ರೇಷ್ಮೆ ಬಟ್ಟೆಯಲ್ಲಿ ಪೋಣಿಸುವ ಮೂಲಕ ಅಸ್ಸಾಂನ ಮಹಿಳೆ ಹೊಸ ಪ್ರಯತ್ನಕ್ಕೆ ಸಾಕ್ಷಿಯಾಗಿದ್ದಾರೆ.
ಸಂಸ್ಕೃತ ಭಾಷೆಯಲ್ಲಿನ 700 ಶ್ಲೋಕಗಳನ್ನು 150 ಅಡಿ ಉದ್ದದ ರೇಷ್ಮೆ ಬಟ್ಟೆಯಲ್ಲಿ ಬರೆದಿರುವ ಅಸ್ಸಾಂನ ದಿಬ್ರೂಗಢದ ಹೇಮಪ್ರಭಾ ಚುಟಿಯಾ ಎಂಬ ಮಹಿಳೆ, ಸೃಜನಾತ್ಮಕವಾಗಿ ರಚನೆ ಮಾಡಿದ್ದಾರೆ. ಅಲ್ಲದೆ ಒಂದು ಭಾಗವನ್ನು ಆಂಗ್ಲ ಭಾಷೆಯಲ್ಲೂ ಬರೆದು ಹೆಸರು ಮಾಡಿದ್ದಾರೆ.
2016ರ ಡಿಸೆಂಬರ್ 4 ರಂದು ಭಗವದ್ಗೀತೆಯ ಶ್ಲೋಕಗಳನ್ನು ರೇಷ್ಮೆ ಬಟ್ಟೆಯಲ್ಲಿ ಪೋಣಿಸುವ ಕಾರ್ಯ ಆರಂಭಿಸಿದ ಹೇಮಪ್ರಭಾ, 2018 ಆಗಸ್ಟ್ 26ಕ್ಕೆ ಪೂರ್ಣಗೊಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೇಮಪ್ರಭಾ, ಈ ಹಿಂದೆ ಸಂಕರದೇವ್ನ ಗುಣಮಾಲ ಹಾಗೂ ಮಾಧವದೇವ್ನ ನಾಮ್ ಗೋಸವನ್ನು ಬಟ್ಟೆಯಲ್ಲಿ ಬರೆದಿದ್ದೆ. ಇದೀಗ ಭಗವದ್ಗೀತೆಯನ್ನು ಬಟ್ಟೆಯಲ್ಲಿ ಬರೆದಿರುವ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.
80 ಅಡಿ ಉದ್ದದ ಮುಗ ರೇಷ್ಮೆ ಬಟ್ಟೆಯಲ್ಲಿ 2014ರಲ್ಲಿ ಗುಣಮಾಲವನ್ನು ಬರೆಯಲಾಗಿತ್ತು. 2016ರಲ್ಲಿ ನಾಮ್ ಘೋಷವನ್ನು ಬಟ್ಟೆಯಲ್ಲಿ ಬರೆದಿದ್ದರು.
ಕ್ರಿಯಾಶೀಲ ಹಾಗೂ ಸೃಜನಾತ್ಮಕ ಸಾಧನೆಗೆ ಅನೇಕ ಪ್ರಶಸ್ತಿಗಳನ್ನು ಹೇಮಪ್ರಭಾ ಪಡೆದುಕೊಂಡಿದ್ದಾರೆ. ರೇಷ್ಮೆ ಇಲಾಖೆಯ ಟೆಕ್ಸ್ಟೈಲ್ ಪ್ರಶಸ್ತಿಯನ್ನೂ ಇವರು ಪಡೆದುಕೊಂಡಿದ್ದಾರೆ.
Assam woman weaves Bhagavad Gita on cloth