ರೈತನ ಮಗ ಯುವ ಅಥ್ಲೀಟ್ ನೀರಜ್ ಚೋಪ್ರ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಎಸೆತ ಎಸೆದು ಸ್ವರ್ಣಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದರೆ. ಅಥ್ಲೀಟ್ಗಳಾದ ಸುಧಾ ಸಿಂಗ್, ನೀನಾ ವರಾಕಿಲ್ಪಿಂಟೊ ಮತ್ತು ಧರುಣ್ ಅಯ್ಯಸ್ವಾಮಿ ಬೆಳ್ಳಿ ಪದಕ ಗೆದ್ದು ಮಿಂಚಿದ್ರು. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕಂಚಿನ ಪದಕಕ್ಕೆ ತೃಪತ್ತಿ ಪಟ್ಟರು.
ಅಥ್ಲಿಟಿಕ್ಸ್ನಲ್ಲಿ ದೊಡ್ಡ ಸ್ಟಾರ್ ಆಗಿರುವ ನೀರಜ್ 88.06 ಮೀಟರ್ ದೂರ ಎಸೆದು ಚಿನ್ನದ ಪದಕ ಪಡೆದರು.ಇದರೊಂದಿಗೆ ನೀರಜ್ ಎಷ್ಯನ್ ಗೇಮ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದ್ರು. ಜೊತೆಗೆ ಜಾವೆಲಿನ್ ಥ್ರೊ ವಿಭಾಗದಲ್ಲಿ ಪದಕ ತಂದುಕೊಟ್ಟ ಎರಡನೇ ಭಾರತೀಯ ಅಥ್ಲೀಟ್ ಎಂಬ ಗೌರವವನ್ನ ಪಡೆದರು. 1982ರ ಏಷ್ಯನ್ ಗೆಮ್ಸ್ನಲ್ಲಿ ಗುರ್ತೇಜ್ ಕಂಚಿನ ಪದಕ ಪಡೆದಿದ್ದರು.
ಸುಧಾ, ನೀನಾ, ಧರುಣ್ಗೆ ಬೆಳ್ಳಿ
ಇನ್ನು ಮಹಿಳಾ ವಿಭಾಗದ ಮೂರು ಸಾವಿರ ಸ್ಟೀಪಲ್ ಚೇಸ್ ವಿಭಾಗದಲ್ಲಿ ದೂರದ ಓಟಗಾರ್ತಿ ಸುಧಾ ಸಿಂಗ್ 9:40.03 ಸೆಕೆಂಡುಗಳಲ್ಲಿ ಗುರಿಮುಟ್ಟಿ ಬೆಳ್ಳಿ ಪದಕ ಪಡೆದರು. ಇದರೊಂದಿಗೆ ಎರಡನೇ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಪಡೆದ ಸಾಧನೆ ಮಾಡಿದರು.
ಪುರುಷರ 400ಮೀ. ಹರ್ಡಲ್ಸ್ನಲ್ಲಿ ತಮಿಳುನಾಡಿದ ಧರುನ್ಅಯ್ಯಸ್ವಾಮಿ 48.96 ಸೆಕೆಂಡುಗಳಲ್ಲಿ ಗುರಿಮುಟ್ಟಿ ತಾವೇ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನ ಮುರಿದರು.
ಮಹಿಳಾ ವಿಭಾಗದ ಲಾಂಗ್ ಜಂಪ್ನಲ್ಲಿ ನೀನಾವರಾಕಿಲ್ 6.51 ಮೀಟರ್ ಉದ್ದ ಜಿಗಿದು ಬೆಳ್ಳಿ ಪದಕ ಪಡೆದರು.
ಫೈನಲ್ಗೆ ಸಿಂಧು, ಸೈನಾಗೆ ಕಂಚು
ಇನ್ನು ಮಹಿಳೆಯರ ಬ್ಯಾಡ್ಮಿಂಟನ್ನ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಆಟಗಾರ್ತಿ ಪಿ.ವಿ.ಸಿಂಧು ಫೈನಲ್ ತಲುಪಿದ್ದಾರೆ. ಆದರೆ ಮತ್ತೊರ್ವ ಅಗ್ರ ಆಟಗಾರ್ತಿ ಸೈನಾ ನೆಹ್ವಾಲ್ ಸೆಮಿಫೈನಲ್ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟಿದ್ದಾರೆ.ಸಿಂಧು ಜಪಾನ್ನ ಅಕಾನೆ ಯಮಗೂಚಿ ವಿರುದ್ಧ 21-17, 15-21, 21-10 ಅಂಕಗಳಿಂದ ಗೆದ್ದು ಪ್ರಶಸ್ತಿ ಸುತ್ತು ತಲುಪಿದರು.