ಡಿಸೆಂಬರ್ 31ರೊಳಗೆ ಚಿಪ್ ಆಧಾರಿತ ಡೆಬಿಟ್ ಕಾರ್ಡುಗಳಿಗೆ ಬದಲಾಯಿಸಿಕೊಳ್ಳಿ; ಎಸ್ ಬಿಐ
August 27, 2018VDವಾಣಿಜ್ಯComments Off on ಡಿಸೆಂಬರ್ 31ರೊಳಗೆ ಚಿಪ್ ಆಧಾರಿತ ಡೆಬಿಟ್ ಕಾರ್ಡುಗಳಿಗೆ ಬದಲಾಯಿಸಿಕೊಳ್ಳಿ; ಎಸ್ ಬಿಐ
Seen By: 109
ನವದೆಹಲಿ: ಡಿಸೆಂಬರ್ 31ರೊಳಗೆ ಎಟಿಎಂ ಡೆಬಿಟ್ ಕಾರ್ಡಿನಲ್ಲಿ ಮ್ಯಾಗ್ನೆಟಿಕ್ ಸ್ಟ್ರೈಪ್ ಬದಲಿಗೆ ಇಎಂವಿ ಚಿಪ್ ಗೆ ಬದಲಾಯಿಸಿಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸೂಚಿಸಿದೆ.ಕೇವಲ ಚಿಪ್ ಆಧಾರಿತ ಮತ್ತು ಪಿನ್ ಹೊಂದಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ನೀಡುವಂತೆ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕು ಆಫ್ ಇಂಡಿಯಾ ತಿಳಿಸಿದೆ. ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ.ನಕಲಿ ಕಾರ್ಡುಗಳ ವಂಚನೆಯಿಂದ ಇವಿಎಂ ಚಿಪ್ ಆಧಾರಿತ ಕಾರ್ಡುಗಳು ಗ್ರಾಹಕರನ್ನು ರಕ್ಷಿಸುತ್ತದೆ. ವಂಚನೆ, ಕಾರ್ಡು ಕಳೆದುಹೋಗುವುದು ಮತ್ತು ಕದ್ದು ಹೋದರೆ ವಂಚನೆಯಾಗುವುದನ್ನು ಇಎಂವಿ ಚಿಪ್ ಆಧಾರಿತ ಕಾರ್ಡುಗಳು ರಕ್ಷಿಸಿ ಪಿನ್ ಸಂಖ್ಯೆಯನ್ನು ರಕ್ಷಿಸುತ್ತದೆ.ಇಎಂವಿ ಎಂದರೆ ಯುರೊಪೇ ಮಾಸ್ಟರ್ ಕಾರ್ಡು ವೀಸಾ ಮತ್ತು ಪಿನ್ ಎಂದರೆ ಪರ್ಸನಲ್ ಐಡೆಂಟಿಫಿಕೇಶನ್ ನಂಬರ್ ಎಂಬುದಾಗಿದೆ.ರಿಸರ್ವ್ ಬ್ಯಾಂಕಿನ ಸೂಚನೆಯಂತೆ 2018ರ ಅಂತ್ಯದೊಳಗೆ ಮ್ಯಾಗ್ ಸ್ಟ್ರೈಪ್ ಡೆಬಿಟ್ ಕಾರ್ಡುಗಳನ್ನು ಇಎಂವಿ ಚಿಪ್ ಡೆಬಿಟ್ ಕಾರ್ಡು ಗಳಿಗೆ ಬದಲಾಯಿಸಬೇಕೆಂದು ಎಸ್ ಬಿಐ ಟ್ವೀಟ್ ಮಾಡಿದೆ. ಅದನ್ನು ಗ್ರಾಹಕರಿಗೆ ಉಚಿತವಾಗಿ ನೀಡಲಾಗುತ್ತದೆ.
ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ