2019ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕತೆ 7.4ಕ್ಕೆ ಏರಿಕೆ: ಎನ್ ಸಿಎಇಆರ್

ನವದೆಹಲಿ: 2019ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕತೆ 7.4ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರ ತಂಡವೊಂದು ಅಭಿಪ್ರಾಯಪಟ್ಟಿದೆ.
ಈ ಬಗ್ಗೆ ವರದಿ ಬಿಡುಗಡೆ ಮಾಡಿರುವ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರೀಸರ್ಚ್ (National Council of Applied Economic Research)ನ ಚಿಂತಕರ ತಂಡವೊಂದು, 2019ನೇ ವಿತ್ತೀಯ ವರ್ಷದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ 7.4ಕ್ಕೆ ಏರಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ವರದಿಯಲ್ಲಿ ಕುಂಟುತ್ತಾ ಸಾಗಿರುವ ಕೃಷಿಕ ಅಭಿವೃದ್ಧಿ ದರ ಕೂಡ 4.6ಕ್ಕೆ ಏರಿಕೆಯಾಗುವ ಸಾಧ್ಯಕೆ ಇದ್ದು, ಕೈಗಾರಿಕಾ ಅಭಿವೃದ್ಧಿದರ 5.1ಕ್ಕೆ ಏರಿಕೆಯಾಗುವ ಸಂಭವವಿದೆ ಎಂದು ಹೇಳಿದೆ.
ವೈ ಒ ವೈ (year-on-year) ಆಧಾರದ ಅನ್ವಯ ತಜ್ಞರು ಇಂತಹುದೊಂದು ವರದಿ ನೀಡಿದ್ದು, ಆರ್ಥಿಕ ಅಭಿವೃದ್ಧಿಯ ಮಾರುಕಟ್ಟೆ ಮೌಲ್ಯ 7.4ಕ್ಕೆ ಏರಿಕೆಯಾಗಲಿದೆ ಎಂದು ಎನ್ ಸಿಎಇಆರ್ ತನ್ನ ತ್ರೈಮಾಸಿಕ ವರದಿಯಲ್ಲಿ ಉಲ್ಲೇಖ ಮಾಡಿದೆ. ಉಳಿದಂತೆ ರಫ್ತು ಮತ್ತು ಆಮದು ದರದಲ್ಲಿ ಕೊಂಚ ಏರಿಳಿತವಾಗಲಿದ್ದು, ರಫ್ತು ದರ 11.9ರಷ್ಟಾಗಿದ್ದರೆ, ಆಮದು ದರ 15.1ರಷ್ಟಾಗಲಿದೆ. ವರದಿಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ 2018-19ನೇ ವಿತ್ತೀಯ ವರ್ಷದಲ್ಲಿ ರಫ್ತು ದರ ಶೇ.18ಕ್ಕೆ ಏರಿಕೆಯಾಗಿದ್ದರೆ, ಅಮದು ದರ 15.1ಕ್ಕೆ ಕುಸಿತವಾಗಿದೆ. ಇದು ಆರ್ಥಿಕತೆಯ ಅರೋಗ್ಯಕರ ಅಂಶ ಎಂದು ತಜ್ಞರು ಬಣ್ಣಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ