ಪ್ರವಾಹ ಪೀಡಿತ ಕೇರಳದ ಯುವತಿಯರು ಡಾ.ಅಗರ್ವಾಲ್ ಆಸ್ಪತ್ರೆಯಲ್ಲಿ ರಕ್ಷಾ ಬಂಧನ ಆಚರಣೆ

 

ಬೆಂಗಳೂರು, ಆ.26- ಪ್ರವಾಹ ಪೀಡಿತ ಕೇರಳದ ಯುವತಿಯರು ಡಾ.ಅಗರ್ವಾಲ್ ಆಸ್ಪತ್ರೆಯಲ್ಲಿ ಓಣಂ ಮತ್ತು ರಕ್ಷಾಬಂಧನ ಪ್ರಯುಕ್ತ ಎಡಿಜಿಪಿ ಭಾಸ್ಕರ್ ರಾವ್, ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಗೆ ರಾಖಿ ಕಟ್ಟುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎನ್.ಎ. ಹ್ಯಾರೀಸ್ , ಕೇರಳ ಹಾಗೂ ಕೊಡಗಿನಲ್ಲಿ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾವೆಲ್ಲರೂ ಅವರ ರಕ್ಷಣೆಗೆ ಇದ್ದೇವೆ ಎನ್ನುವ ಸಂದೇಶ ಸಾರಲು ಅಗರ್ವಾಲ್ ಆಸ್ಪತ್ರೆ ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಿದೆ. ಅಲ್ಲದೇ ಪ್ರವಾಹ ಪೀಡಿತ ಕೇರಳಕ್ಕೆ ಅಗತ್ಯ ವೈದ್ಯಕೀಯ ಸಲಕರಣೆ ಹಾಗೂ ಸಿಬ್ಬಂದಿ ತೆರಳಿ ಅಗತ್ಯ ಚಿಕಿತ್ಸೆ ನೀಡಲಿದ್ದಾರೆ ಎಂದು
ಹೇಳಿದರು.
ರಾಣಿ ಪದ್ಮಾವತಿ ಕೂಡ ಮೊಘಲ್ ರಾಜರಿಗೆ ರಾಖಿ ಕಟ್ಟಿದ್ದ ಇತಿಹಾಸವನ್ನು ನೆನಪಿಸಿದ ಭಾಸ್ಕರ್ ರಾವ್, ಕೊಡಗು ಮತ್ತು ಕೇರಳದಲ್ಲಿ ನೆರೆ ಪ್ರವಾಹ ಉಂಟಾಗಿರುವುದರಿಂದ ನಾವೆಲ್ಲರೂ ಒಂದಾಗಿ ಅವರಿಗೆ ಸಹಾಯ ಮಾಡಬೇಕು ಎಂದರು.
ಡಾ. ಅಗರ್ವಾಲ್ ಫೌಂಡೇಶನ್ ಮುಖ್ಯಸ್ಥೆ ಡಾ.ಸುನೀತಾ ಅಗರ್ವಾಲ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಾಗಿರುವ ಕೇರಳದ ನರ್ಸ್ ಗಳು ಪೆÇಲೀಸರಿಗೆ ಆರತಿ ಬೆಳಗಿ ರಾಖಿ ಕಟ್ಟಿದರು.
ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‍ಗೂ ಕೇರಳದ ಯುವತಿಯರು ರಾಖಿ ಕಟ್ಟಿ ಅಣ್ಣ ತಂಗಿಯರ ಬಾಂಧವ್ಯ ಸಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೊಹಮದ್ ನಲಪಾಡ್, ಕೇರಳ ಹಾಗೂ ಕೊಡಗು ಪ್ರವಾಹದಿಂದ ಸಾಕಷ್ಟು ಜನ ತೊಂದರೆಗೀಡಾಗಿದ್ದಾರೆ. ಅಲ್ಲಿನ ಸಂತ್ರಸ್ತರಿಗೆ ಆಹಾರದ ನೆರವಿನೊಂದಿಗೆ ಆರೋಗ್ಯದತ್ತ ಕೂಡ ಗಮನ ಹರಿಸಬೇಕಿದೆ . ಹೀಗಾಗಿ ಹ್ಯಾರಿಸ್ ಫೌಂಡೇಶನ್ ನಿಂದ ಕೇರಳದಲ್ಲಿ ಹೆಲ್ತ್ ಕ್ಯಾಂಪ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ