ವಿನಾಶದ ಅಂಚಿನಲ್ಲಿ ಆಫ್ರಿಕಾದ ಕಪ್ಪು ಮತ್ತು ಬಿಳಿ ಘೇಂಡಾಮೃಗಗಳು

ಬೆಂಗಳೂರು, ಆ.26- ಆಫ್ರಿಕಾದ ಕಪ್ಪು ಮತ್ತು ಬಿಳಿ ಘೇಂಡಾಮೃಗಗಳು ವಿನಾಶದ ಅಂಚಿನಲ್ಲಿದ್ದು, ಅದರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಲಂಡನ್‍ನಲ್ಲಿ ಸಹಾಯಾರ್ಥ ಸಂಸ್ಥೆ ಟಸ್ಕ್ ನಡೆಸುತ್ತಿರುವ ದಿ ಟಸ್ಕ್ ರಿನೊ ಟ್ರೇಲ್‍ಗೆ ಫಾರ್‍ಎವರ್‍ಮಾರ್ಕ್ ಸಂಸ್ಥೆ ಬೆಂಬಲ ಘೋಷಿಸಿದೆ.
ಘೇಂಡಾಮೃಗ ಮತ್ತು ಅದರ ಜೊತೆಗಿನ ಆಫ್ರಿಕನ್ ಪ್ರಾಣಿಜಾತಿಗಳ ಸಂರಕ್ಷಣೆಗಾಗಿ ಪ್ರಮುಖವಾದ ನಿಧಿ ಸಂಗ್ರಹಿಸಲು ಟಸ್ಕ್ ರಿನೊ ಟ್ರೇಲ್‍ಗೆ ಅಂತಾರಾಷ್ಟ್ರೀಯವಾಗಿ ಆಹ್ವಾನಿತ ಮತ್ತು ಆಯ್ದ ಕಲಾವಿದರು ಮತ್ತು ವಿನ್ಯಾಸಕಾರರು ಬೆಂಬಲ ನೀಡಿದ್ದಾರಲ್ಲದೆ ಇವರು ವಿಶೇಷವಾಗಿ ವಿನ್ಯಾಸಗೊಳಿಸಲಾದ, ಅಲಂಕರಿಸಲಾದ 21 ಘೇಂಡಾಮೃಗಗಳ ಶಿಲ್ಪಗಳನ್ನು ರಚಿಸಲಿದ್ದಾರೆ.

ಫಾರ್‍ಎವರ್‍ಮಾರ್ಕ್ ಬೆಂಬಲದ ರಿನೊ ಶಿಲ್ಪಕ್ಕಾಗಿ ಸಮಕಾಲೀನ ಬ್ರಿಟಿಷ್ ಕಲಾವಿದ ದೇವ್ ವ್ಹೈಟ್ ಅವರೊಂದಿಗೆ ಫಾರ್‍ಎವರ್‍ಮಾರ್ಕ್ ಪಾಲುದಾರಿಕೆ ಮಾಡಿಕೊಂಡಿದೆ.
ಲಂಡನ್‍ನ ಆಯ್ದ ಪ್ರಮುಖ ಸ್ಥಳಗಳಲ್ಲಿ ಈ ಶಿಲ್ಪಗಳ ಪ್ರದರ್ಶನ ನಡೆಯಲಿದೆ. ಈ ಸ್ಥಳಗಳಲ್ಲಿ ನ್ಯೂ ಬಾಂಡ್ ಸ್ಟ್ರೀಟ್, ಟ್ರಫಾಲ್ಗರ್ ಸ್ಕ್ವೈರ್, ಕೋವೆಂಟ್ ಗಾರ್ಡನ್ ಮತ್ತು ಕಾರ್ನಬಿ ಸ್ಟ್ರೀಟ್‍ಗಳು ಸೇರಿದ್ದು ಈ ಪ್ರದರ್ಶನ ಸೆಪ್ಟೆಂಬರ್ 22,ರಂದು ವಿಶ್ವ ಘೇಂಡಾಮೃಗ ದಿನದ ಆಚರಣೆಯೊಂದಿಗೆ ಮುಕ್ತಾಯವಾಗಲಿದೆ. ಈ ಅನನ್ಯ ಕಲಾಕೃತಿಗಳು ನಂತರ ಅಕ್ಟೋಬರ್ 9ರಂದು ಲಂಡನ್‍ನ ಹರಾಜು ಸಂಸ್ಥೆಯಾದ ಕ್ರಿಸ್ಟೀಸ್ ಅವರು ಆತಿಥ್ಯವಹಿಸುವ ಟಸ್ಕ್ ಸಹಾಯಾರ್ಥ ಕಾರ್ಯಕ್ರಮದಲ್ಲಿ ಹರಾಜಾಗಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ