ಕೋಲ್ಕತ್ತಾ :ಆ-26: ಮುಂಬರುವ ಲೋಕಸಭಾ ಚುನಾವಣೆಗೆ ಕೋಮುವಾದಿಯೇತರ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದ್ದು, ಎಡಪಕ್ಷಗಳು ಮೈತ್ರಿ ಸೇರಲು ಹಿಂಜರಿಯಬಾರದು ಎಂದು ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದಾರೆ.
ನಿರಂಕುಶ ಪ್ರವೃತ್ತಿ ವಿರುದ್ಧ ನಾವು ವಿರೋಧ ವ್ಯಕ್ತಪಡಿಸಿಬೇಕು, ಸರ್ವಾಧಿಕಾರ ಪ್ರವೃತಿ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಇಂತಹ ವಿಚಾರಗಳನ್ನು ಟೀಕಿಸಲು ಕೋಮುವಾದಿಯೇತರ ಶಕ್ತಿಗಳು ಒಂದಾಗಬೇಕಿದೆ. ಆದರೆ, ಕೋಮುವಾದಿ ವಿರುದ್ಧ ಹೋರಾಟದ ಸಂದರ್ಭದಲ್ಲಿ ನಾವು ಒಂದಾಗಿ ಕೈ ಜೋಡಿಸುತ್ತಿಲ್ಲ. ಇದು ದೊಡ್ಡ ಬೆದರಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2014ರ ಚುನಾವಣೆಯಲ್ಲಿ ಶೇ 55 ರಷ್ಟು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಒಟ್ಟಾರೇ, ಶೇ. 31 ರಷ್ಟು ಮತಗಳನ್ನು ಮಾತ್ರ ಪಡೆದಿತ್ತು . ರಾಜಕೀಯ ದುರುದ್ದೇಶದಿಂದ ಅಧಿಕಾರಕ್ಕೆ ಬಂದಿತ್ತು ಎಂದು ಸೇನ್ ಟೀಕಿಸಿದ್ದಾರೆ.
ದೇಶದಲ್ಲಿನ ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದೆ. ಆದರೆ, ಜನರಿಂದ ಮಾತ್ರ ರಕ್ಷಿಸಲು ಸಾಧ್ಯವಿದೆ. ಬಹುಪಕ್ಷಗಳ ಪದ್ಧತಿಯಿಲ್ಲದೆ ಪ್ರಜಾಪ್ರಭುತ್ವ ಕಾರ್ಯನಿರ್ವಹಣೆ ಅಸಾಧ್ಯವಾದದ್ದು ಎಂದು ತಿಳಿಸಿದ್ದಾರೆ.