ಕಲಬುರ್ಗಿ: ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿ

ಕಲಬುರ್ಗಿ: ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದೆ.

ಶ್ರೀನಿವಾಸ್ ಸರಡಗಿ ಬಳಿ ಇರುವ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಮೊದಲ ವಿಮಾನ ರನ್ ವೇ ನಲ್ಲಿ ಇಳಿದಿದೆ. ಹೈದರಾಬಾದ್ ನ ಏಷ್ಯಾ ಫೆಸಿಫಿಕ್ ಫ್ಲೈಟ್ ಟ್ರೇನಿಂಗ್ ಸಂಸ್ಥೆಯ ಡೈಮಂಡ್ ಡಿಎ 40 ಮತ್ತು ಡೈಮಂಡ್ ಡಿಎ 42, ನಾಲ್ಕು ಆಸನಗಳ ಪುತ್ತ ವಿಮಾನಗಳನ್ನು ಕ್ಯಾಪ್ಟನ್ ಜಾನ್ಹವಿ, ಕ್ಯಾಪ್ಟನ್ ಸಂಜೀವ್ ಸೇರಿ ಹಲವು ತಂತ್ರಜ್ಞರ ತಂಡ ವಿಮಾನಗಳನ್ನು ಭೂ ಸ್ಪರ್ಷ ಮಾಡಿದೆ.

ಇಂದಿನ ಪ್ರಾಯೋಗಿ ಹಾರಾಟ ವೀಕ್ಷಣೆಗಾಗಿ ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಸೇರಿ ಅನೇಕ ಜನಪ್ರತಿನಿಧಿಗಳು, ಮುಖಂಡರು ಸಹ ಆಗಮಿಸಿದ್ದರು.

ಈ ಸಂದರ್ಭ ಮಾತನಾಡಿದ ಖರ್ಗೆ ಕಲಬುರ್ಗಿ ಜನರಿಗೆ ವಿಮಾನ ನಿಲ್ದಾಣ ಉಪಯೋಗವಾಗಲಿ, ಈ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಗೆ ಸೇರಿಸುವ ಮೂಲಕ ಸಾಮಾನ್ಯರು ವಿಮಾನ ಸೇವೆ ಬಳಸುವಂತಾಗಲಿ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ