ಸೆ.8, 9ರಂದು ಮರಳಿ ಮಣ್ಣಿಗೆ ಕಾರ್ಯಾಗಾರ

Varta Mitra News

 

ಬೆಂಗಳೂರು, ಆ.25- ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನ ವತಿಯಿಂದ ಸೆ.8, 9ರಂದು ಮರಳಿ ಮಣ್ಣಿಗೆ ಕಾರ್ಯಾಗಾರವನ್ನು ದ್ವಾರಕ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ ಎಂದು ಆಂದೋಲನದ ಸಂಚಾಲಕ ನರಸಿಂಹಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿಯನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ಪುನರುತ್ಪಾದಕ ಮೂಲಕ ನೈಸರ್ಗಿಕ ಕೃಷಿ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶವಾಗಿದೆ ಹಾಗೂ ಹಳ್ಳಿಗಳಲ್ಲಿ ತಮ್ಮ ಆಹಾರವನ್ನೇ ತಾವೇ ಬೆಳೆಯುವ ಕೃಷಿ ಪದ್ಧತಿಯನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುವುದು ಹಾಗೂ ತರಕಾರಿ ಬೆಳೆಯಲು ರಾಸಾಯನಿಕ ಗೊಬ್ಬರ ಬಳಸದೇ ಹಸಿ ಕಸದ ಸದ್ಬಳಕೆ ಮಾಡುವಂತೆ ತಮ್ಮ ಸಂಸ್ಥೆಯ ಮತ್ತೊಂದು ಉದ್ದೇಶವಾಗಿದೆ ಎಂದು ತಿಳಿಸಿದರು.

ರೈತರೊಂದಿಗೆ ನಗರದವರೊಂದಿಗೆ ನೇರ ವ್ಯವಹರಿಸಲು ಅನುಕೂಲ ಮಾಡಿಕೊಡಲಾಗುವುದು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಿಂದ ತಂದ ಗೊಬ್ಬರ, ಕೀಟನಾಶಕ ಇತ್ಯಾದಿಗಳನ್ನೇ ಅವಲಂಬಿಸಿ ಖರ್ಚು ಹೆಚ್ಚಾಗಿ ನಿರೀಕ್ಷಿಸಿದ ಆದಾಯಸಿಗದೇ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಹಾಗೂ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತಿದೆ ಹಾಗೂ ಪರಿಸರದ ವ್ಯವಸ್ಥೆಯೂ ಕೂಡ ಹದಗೆಡುತ್ತಿದೆ. ಅಪೌಷ್ಠಿಕ ಆಹಾರ ಬಳಕೆಯಿಂದ ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಇದನ್ನೆಲ್ಲಾ ತಡೆಗಟ್ಟುವ ಉದ್ದೇಶದಿಂದ ಮರಳಿ ಮಣ್ಣಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.

ಈ ಕಾರ್ಯಾಗಾರದಲ್ಲಿ ರೈತರಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ನೈಸರ್ಗಿಕ ಫಲವತ್ತಾದ ಗೊಬ್ಬರಗಳ ಬಳಕೆಯ ಬಗ್ಗೆ ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.

ಮರಳಿ ಮಣ್ಣಿಗೆ ಆಂದೋಲನ ಗೋಕುಲ ವಿದ್ಯಾಪ್ರತಿಷ್ಠಾನ ಲ್ಯೂಮಿನಾಸೆನ್ಸ್ ಸೊಸೈಟಿ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.
ಪದ್ಮಶ್ರೀ, ಬಸವಶ್ರೀ ಸುಭಾಷ್ ಪಾಳೇಕರ್ ಅವರು ಮರಳಿ ಮಣ್ಣಿಗೆ ಕಾರ್ಯಕ್ರಮವನ್ನು ನಡೆಸಿಕೊಳ್ಳಲಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ