ಒಂದು ಕೆಜಿ ಟೀ ಪುಡಿಗೆ ಕೇವಲ 40,000 ರೂ.!

ಗುವಾಹಟಿ: ಅರುಣಾಚಲ ಪ್ರದೇಶದ ಒಂದು ಮಾದರಿಯ ಚಹಾ ಪುಡಿಯು ಗುವಾಹಟಿಯ ಟೀ ಹರಾಜು ಕೇಂದ್ರದಲ್ಲಿ ಕೆ.ಜಿಗೆ 40,000 ರೂ.ಗೆ ಮಾರಾಟವಾಗಿದೆ. ಆ ಮೂಲಕ ವಿಶ್ವದಲ್ಲೇ ದಾಖಲೆ ದರವನ್ನು ಗಳಿಸಿದಂತಾಗಿದೆ. ಕಳೆದ ತಿಂಗಳು ನಡೆದಿದ್ದ ಹರಾಜಿನಲ್ಲಿ ಇದೇ ಅಸ್ಸಾಂನ ಮತ್ತೊಂದು ಮಾದರಿಯ ಚಹಾ ಪುಡಿಯು 39,001 ರೂ.ಗೆ ಮಾರಾಟವಾಗಿ ದಾಖಲೆ ಸೃಷ್ಟಿಯಾಗಿತ್ತು.

ದೋನಿ ಪೋಲೊ ಎಸ್ಟೇಟ್‌ನಲ್ಲಿ ಬೆಳೆದ ಗೋಲ್ಡನ್‌ ನೀಡಲ್ಸ್‌ ಟೀ ತಳಿಯ 1.1 ಕೆ.ಜಿ ತೂಕದ ಚಹಾ ಪುಡಿಗೆ ಹರಾಜಿನಲ್ಲಿ 40,000 ರೂ. ಸಿಕ್ಕಿದೆ ಎಂದು ಗುವಾಹಟಿ ಚಹಾ ಹರಾಜು ಖರೀದಿದಾರರ ಸಂಘದ ಕಾರ್ಯದರ್ಶಿ ದಿನೇಶ್‌ ಬಿಹಾನಿ ಹೇಳಿದ್ದಾರೆ. ಈ ಚಹಾ ಪುಡಿಯನ್ನೂ ಆನ್‌ಲೈನ್‌ನಲ್ಲೂ(ಅಚಿsಟ್ಝ್ಠಠಿಛಿಠಿಛಿa.ಜ್ಞಿ) ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಟೀ ಮಾರುಕಟ್ಟೆಯಲ್ಲಿ ಅಸ್ಸಾಂನ ಚಹಾಕ್ಕೆ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ಸಾಂಪ್ರದಾಯಿಕ ಚಹಾ ವಿಷಯದಲ್ಲಿ ಅಸ್ಸಾಂ ಜಗತ್ತಿನ ಗಮನ ಸೆಳೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ವೈಭವ ಮಸುಕಾಗಿತ್ತು. ಈಗಿನ ಬೆಳವಣಿಗೆಗಳು ಅಸ್ಸಾಂನ ಚಹಾ ವೈಭವ ಮರು ವೃದ್ಧಿಗೆ ನೆರವಾಗುವಂತಿವೆ.

ಗೋಲ್ಡನ್‌ ನೀಡಲ್ಸ್‌ 

40,000 ರೂ.ಗೆ ಮಾರಾಟವಾದ ಈ ಗೋಲ್ಡನ್‌ ನೀಡಲ್ಸ್‌ ತಳಿಗೆ ತನ್ನದೇ ಆದ ವಿಶೇಷತೆ ಇದೆ. ಸೂಕ್ಷ್ಮವಾದ ಸಣ್ಣ ಮೊಗ್ಗುಗಳನ್ನು ಈ ತಳಿ ಹೊಂದಿರುತ್ತದೆ. ಚಿನ್ನದ ಬಣ್ಣದ ಎಲೆಗಳು ಮೃದು ಮತ್ತು ತುಂಬಾ ನಯವಾಗಿರುತ್ತದೆ. ಇದರಿಂದ ಮಾಡಿದ ಚಹಾ ಹೊಳೆಯುವ ಚಿನ್ನದ ಬಣ್ಣವನ್ನು ಹೊಂದಿರುತ್ತದೆ. ಈ ತಳಿ ಬೆಳೆದಿರುವ ದೋನಿ ಪೋಲೊ ಎಸ್ಟೇಟ್‌ನ ವ್ಯವಸ್ಥಾಪಕ ಮನೋಜ್‌ ಕುಮಾರ್‌ ಅವರು ಈ ಮೊದಲು ಸಿಲ್ವರ್‌ ನೀಡಲ್ಸ್‌ ವೈಟ್‌ ಟೀ ಮೂಲಕ ಗಮನ ಸೆಳೆದಿದ್ದರು. ಅದು ಕೆ.ಜಿಗೆ 17,0001 ರೂ.ಗೆ ಮಾರಾಟವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ