ಕೊಡಗು ಸಹಜ ಸ್ಥಿತಿಗೆ ಮರಳುವವರೆಗೂ ಸಿಎಂ ಹೂ ಗುಚ್ಛ, ಹಾರ-ತುರಾಯಿ ಸ್ವೀಕರಿಸದಿರಲು ನಿರ್ಧಾರ

 

ಬೆಂಗಳೂರು, ಆ.24- ಮಳೆ ಅನಾಹುತಕ್ಕೆ ತುತ್ತಾಗಿರುವ ಕೊಡಗು ಸಹಜ ಸ್ಥಿತಿಗೆ ಮರಳುವವರೆಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗಣ್ಯರು, ಸಾರ್ವಜನಿಕರಿಂದ ಹೂ ಗುಚ್ಛ, ಹಾರ-ತುರಾಯಿ ಸ್ವೀಕರಿಸದಿರಲು ನಿರ್ಧರಿಸಿದ್ದಾರೆ.
ಕೊಡಗು ಜನರು ಸಂಕಷ್ಟದಲ್ಲಿರುವಾಗ ಬೊಕ್ಕೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಸಿಎಂ ಕಚೇರಿ ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ ಗಣ್ಯರು ಸಿಎಂ ಅವರನ್ನು ಭೇಟಿ ಮಾಡಲು ಹಾರ-ತುರಾಯಿ ತಂದಿದ್ದರು.
ಈ ವೇಳೆ ಕೊಡಗು ಸಹಜ ಸ್ಥಿತಿಗೆ ಮರಳುವವರೆಗೂ ಯಾರೂ ಹೂ ಗುಚ್ಛ, ಹಾರ-ತುರಾಯಿ ತರಬಾರದೆಂದು ಸಿಎಂ ಹೇಳಿದ್ದಾರೆ ಎಂದು ಕಚೇರಿ ಸ್ಪಷ್ಟಪಡಿಸಿದೆ.
ಸಂತ್ರಸ್ತರ ನೆರವಿಗಾಗಿ ನೀಡುವ ದೇಣಿಗೆ, ಡಿಡಿ, ಚೆಕ್ ಮಾತ್ರ ಸ್ವೀಕರಿಸಲು ಸಿಎಂ ನಿರ್ಧರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ