ತಿರುವನಂತಪುರಂ:ಆ-24; ಭೀಕರ ಜಲಪ್ರಳಯಕ್ಕೆ ತುತ್ತಾಗಿ ನಲುಗಿ ಹೋಗಿರುವ ದೇವರ ನಾಡು ಕೇರಳದಲ್ಲಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ವರುಣನ ಆರ್ಭಟಕ್ಕೆ ಇಡೀ ರಾಜ್ಯ ಮುಳುಗಿಹೋಗಿತ್ತು. ಇದರ ಜತೆ ಶ್ರೀ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವೂ ಪಂಪಾನದಿ ಪ್ರವಾಹಕ್ಕೆ ಈಡಾಗಿತ್ತು.
ಉಕ್ಕಿಹರಿದ ಪಂಪಾನಧಿ ರಭಸಕ್ಕೆ ನೂನಾರು ಭಕ್ತರು ದೇವಾಲಯದಲ್ಲೇ ಸಿಕ್ಕಿ ಹಾಕಿಕೊಂಡಿದ್ದರು. ದೇವಸ್ತಾನ ಸಹ ಜಲಾವೃತವಾಗಿತ್ತು ನದಿ ದಾಟಲಾಗದೇ ಎಲ್ಲರೂ ಕಂಗಾಲಾಗಿ ಕುಳಿತಿದ್ದರು. ಇಂತಹ ಸಂದರ್ಭದಲ್ಲಿ ಶಬರಿಮಲೆ ಪಂಪಾ ನದಿ ತೀರದಲ್ಲಿ ಪವಾಡವೊಂದು ನಡೆದಿದೆ.
ಪಂಪಾ ನದಿ ದಡದಲ್ಲಿ ರಕ್ಷಣೆಗಾಗಿ ಕಾದು ಕುಳಿತ್ತಿದ್ದವರನ್ನು ಅಜ್ಞಾತವ್ಯಕ್ತಿಯೊಬ್ಬರು ದೋಣಿಯಲ್ಲಿ ಬಂದು ರಕ್ಷಿಸಿದ್ದಾರೆ. ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ವೇಗವಾಗಿ ಹರಿಯುತ್ತಿದ್ದ ನೀರಿನ ನಡುವೆ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.
ನಂತರ ಅಜ್ಞಾತವ್ಯಕ್ತಿ ಮತ್ತೆ ನದಿಯಲ್ಲಿ ದೋಣಿಯನ್ನು ಓಡಿಸಿಕೊಂಡು ಹೋಗಿದ್ದು ನದಿ ಮಧ್ಯದಲ್ಲೇ ಅಜ್ಞಾತವ್ಯಕ್ತಿ ಮತ್ತು ದೋಣಿ ಅದೃಷ್ಯವಾಗಿದೆ. ಇದೇ ವೇಳೆ ದೂರದಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ ಸ್ವಲ್ಪ ಸಮಯದ ನಂತರ ಹುಲಿಯು ಅದೃಶ್ಯವಾಗಿದೆ. ಇದನ್ನು ಕಂಡ ಜನರು ಸ್ವತಃ ಅಯ್ಯಪ್ಪ ಸ್ವಾಮಿಯೇ ನಮ್ಮನ್ನು ಕಾಪಾಡಿದ್ದಾನೆ ಎಂದು ನಂಬಿದ್ದಾರೆ.
ಈ ಕುರಿತ ವಿಡಿಯೋ ಮತ್ತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ.