ಸರ್ಕಾರದ ಯೋಜನೆಗಳಿಗೆ ಲಂಚ ಕೊಡುವ ಪದ್ಧತಿ ಕಾಂಗ್ರೆಸ್ ಅವಧಿಯಲ್ಲೇ ಮುಗಿದಿದೆ: ಪ್ರಧಾನಿ

ಜುಜ್ವಾ :ಆ-೨೪: ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಯಾರೂ ಲಂಚಕೊಡಬೇಕಿಲ್ಲ. ಅಂತಹ ಹೀನ ಪದ್ಧತಿ ಕಾಂಗ್ರೆಸ್ ಅವಧಿಯಲ್ಲಿಯೇ ಅಂತ್ಯವಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಎಲ್ಲರೂ ಸ್ವಂತ ಸೂರು ಹೊಂದಬೇಕೆಂಬುದು ನಮ್ಮ ಸರಕಾರದ ಕನಸಾಗಿದ್ದು, ಅದರ ಈಡೇರಿಕೆಗೆ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದ್ದಾರೆ.

ಗುಜರಾತಿನ ವಲ್ಸಾದ್‌ನಲ್ಲಿರುವ ಜುಜ್ವಾದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಪ್ರಧಾನಿ, ಸರಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಒಂದು ಪೈಸೆ ಕೂಡ ಲಂಚ ಕೊಡಬೇಡಿ. ಅದು ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಯೇ ಕೊನೆಗೊಂಡ ಹೀನ ಪದ್ಧತಿಯಾಗಿದೆ ಎಂದರು.

ಲಂಚದ ಹಾವಳಿ ಇಲ್ಲದೆಯೇ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಸಬ್ಸಿಡಿ ಮೊತ್ತದೊಂದಿಗೆ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಬಹುದಾಗಿದೆ ಎಂದು ಹೇಳಿದರು.

2022ರ ಹೊತ್ತಿಗೆ ದೇಶದ ಗ್ರಾಮೀಣ ಭಾಗದಲ್ಲಿ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹಮ್ಮಿಕೊಳ್ಳಲಾಗಿದೆ ಎಂದರು. 70 ವರ್ಷಗಳ ಹಿಂದೆಯೇ ಸ್ವಚ್ಛ ಭಾರತ ಯೋಜನೆ ಸಾಕಾರಗೊಳಿಸಿದ್ದಿದ್ದರೆ, ಭಾರತವು ರೋಗಮುಕ್ತವಾಗಿರುತ್ತಿತ್ತು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ